Monday, 13th January 2025

Arjun Tendulkar ತಮ್ಮ ಬಳಿ ಕೋಚಿಂಗ್‌ ನಿಲ್ಲಿಸಿದ್ದೇಕೆಂದು ತಿಳಿಸಿದ ಯೋಗರಾಜ್ ಸಿಂಗ್!

ʻPeople are very afraid of name-stickingʼ: Why Arjun Tendulkar stopped training with Yograj Singh

ನವದೆಹಲಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar)ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ತಮ್ಮ ಬಳಿ ತರಬೇತಿ ನಿಲ್ಲಿಸಲು ಕಾರಣವೇನೆಂದು ಸಿಕ್ಸರ್‌ಗಳ ಸರದಾರ ಯುವರಾಜ್ ಸಿಂಗ್ (yuvaraj Singh) ಅವರ ತಂದೆ ಯೋಗರಾಜ್ ಸಿಂಗ್ (Yogaraj Singh) ಬಹಿರಂಗಪಡಿಸಿದ್ದಾರೆ. ಯೋಗರಾಜ್ ಸಿಂಗ್ ಬಳಿ ಮರಿ ತೆಂಡೂಲ್ಕರ್‌ ತರಬೇತಿ ಪಡೆದ ಒಂದು ವರ್ಷದ ಒಳಗೆ ದೇಶಿ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಸ್ಥಾನ ಪಡೆದು ಗಮನ ಸೆಳೆದಿದ್ದರು.

ಅರ್ಜುನ್‌ ತೆಂಡೂಲ್ಕರ್ ತಮ್ಮ ಬಳಿ ತರಬೇತಿ ಪಡೆದ 12 ದಿನಗಳಲ್ಲೇ ಶತಕ ಸಿಡಿಸಿದ್ದರು ಎಂದು ಯೋಗರಾಜ್ ಸಿಂಗ್ ತಿಳಿಸಿದ್ದಾರೆ. ಆದರೆ ಅರ್ಜುನ್ ಹೆಸರು ತನ್ನೊಂದಿಗೆ ಎಲ್ಲಿ ಸೇರುತ್ತದೋ ಎಂದು ಜನರು ಭಯಪಟ್ಟಿದ್ದರು ಎಂದು ಯೋಗರಾಜ್ ಸಿಂಗ್ ತಿಳಿಸಿದ್ದಾರೆ.

“ಸಚಿನ್ ತೆಂಡೂಲ್ಕರ್ ಪುತ್ರ (ಅರ್ಜುನ್ ತೆಂಡೂಲ್ಕರ್) ನನ್ನ ಬಳಿ ತರಬೇತಿಗೆ ಸೇರಿದ 12 ದಿನಗಳಲ್ಲಿ ದೇಶಿ ಕ್ರಿಕೆಟ್‌ನ ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ನಂತರ ಐಪಿಎಲ್‌ನಲ್ಲಿ ಆಡಲು ಅವಕಾಶ ಪಡೆದುಕೊಂಡಿದ್ದರು. ಆದರೆ ಅವರ (ಅರ್ಜುನ್) ಹೆಸರು ನನ್ನೊಂದಿಗೆ (ಯೋಗರಾಜ್ ಸಿಂಗ್) ಎಲ್ಲಿ ಸೇರಿಕೊಂಡು ಬಿಡುತ್ತದೆಯೋ ಎಂದು ಜನರು ಭಯಪಟ್ಟಿದ್ದರು. ನಾನು ಹೇಳುತ್ತಿರುವ ಅಂಶ ನಿಮಗೆ ಅರ್ಥವಾಗಿರಬೇಕು,” ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.

“ಅರ್ಜುನ್ ತೆಂಡೂಲ್ಕರ್‌ನಿಂದಾಗಿ ನನ್ನ ಹೆಸರು ಎಲ್ಲಿ ಪ್ರಸಿದ್ಧಿ ಪಡೆಯುತ್ತದೆಯೋ ಎಂದು ಜನರು ಭಯಪಟ್ಟಿದ್ದರು. ಸಚಿನ್ ತೆಂಡೂಲ್ಕರ್‌ಗೆ ಕರೆ ಮಾಡಿ ಅರ್ಜುನ್ ತೆಂಡೂಲ್ಕರ್ ಅವರನ್ನು ಮತ್ತೊಂದು ವರ್ಷ ನನ್ನ ಬಳಿಯೇ ಬಿಟ್ಟು ಆತನ ಮುಂದಿನ ಭವಿಷ್ಯದಲ್ಲಿ ಆಗುವ ಬದಲಾವಣೆ ಗಮನಿಸುವಂತೆ ನನ್ನ ಪುತ್ರ ಯುವರಾಜ್‌ ಸಿಂಗ್‌ಗೆ ಹೇಳಿದ್ದೆ,” ಎಂದು ಯೋಗರಾಜ್ ಸಿಂಗ್ ತಿಳಿಸಿದ್ದಾರೆ.

ವಿಜಯ್ ಹಝಾರೆ ಟ್ರೋಫಿಯಲ್ಲಿ ಭಾಗಿ

ಪ್ರಸಕ್ತ ಅರ್ಜುನ್ ತೆಂಡೂಲ್ಕರ್ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ್ದ ಎರಡು ಪಂದ್ಯಗಳಲ್ಲಿ 40 ರನ್ ಗಳಿಸಿದ್ದರೆ, ಬೌಲಿಂಗ್‌ನಲ್ಲಿ ಮೂರು ಪಂದ್ಯಗಳಲ್ಲಿ 4 ವಿಕೆಟ್ ಪಡೆದಿದ್ದಾರೆ.

ದೇಶಿ ಕ್ರಿಕೆಟ್‌ನಲ್ಲಿ ಅರ್ಜುನ್ ಪ್ರದರ್ಶನ

ಇತ್ತೀಚೆಗೆ ರಣಜಿ ಟೂರ್ನಿಯಲ್ಲಿ ಮೂರು ಇನಿಂಗ್ಸ್‌ಗಳಿಂದ 17 ಸರಾಸರಿಯಲ್ಲಿ ಅರ್ಜುನ್ ತೆಂಡೂಲ್ಕರ್ 51 ರನ್ ಬಾರಿಸಿದ್ದಾರೆ. ಆದರೆ ಅಪ್ರತಿಮ ಬೌಲಿಂಗ್ ಪ್ರದರ್ಶನ ತೋರಿ 4 ಪಂದ್ಯಗಳಿಂದ ಒಂದು ಬಾರಿ ಐದು ವಿಕೆಟ್ ಸೇರಿದಂತೆ 18.18ರ ಸರಾಸರಿಯಲ್ಲಿ 16 ವಿಕೆಟ್ ಪಡೆದಿದ್ದಾರೆ. ಇನ್ನು 2024-25ರ ಸಯ್ಯದ್ ಮುಷ್ತಾಕ್ ಟ್ರೋಫಿ ಟೂರ್ನಿಯಲ್ಲಿ ಎರಡು ಪಂದ್ಯಗಳಿಂದ 21 ರನ್ ಹಾಗೂ ಒಂದು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.

ಈ ಸುದ್ದಿಯನ್ನು ಓದಿ: ರಾಹುಲ್‌, ಜಡೇಜಾ ಔಟ್‌! Champions Trophyಗೆ ಭಾರತ ತಂಡವನ್ನು ಆರಿಸಿದ ಹರ್ಭಜನ್‌ ಸಿಂಗ್‌!

Leave a Reply

Your email address will not be published. Required fields are marked *