Sunday, 15th December 2024

ಮಾಜಿ ಆಲ್’ರೌಂಡರ್ ಕ್ರಿಸ್ ಕೇರ್ನ್ಸ್ ಆರೋಗ್ಯ ಸ್ಥಿತಿ ಗಂಭೀರ

ನವದೆಹಲಿ : ನ್ಯೂಜಿಲೆಂಡ್ ಮಾಜಿ ಆಲ್ ರೌಂಡರ್ ಕ್ರಿಸ್ ಕೇರ್ನ್ಸ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ವರದಿಗಳ ಪ್ರಕಾರ, 51 ವರ್ಷದ ಕ್ರಿಸ್ ನ ಅಪಧಮನಿಯ ಒಳ ಪದರವು ಹರಿದು ಹೋಗಿದೆ. ಕಳೆದ ವಾರ ಕ್ಯಾನ್ಬೆರಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವು ಶಸ್ತ್ರಚಿಕಿತ್ಸೆಗಳನ್ನ ನೆರವೇರಿಸಲಾಗಿದೆ. ಆದರೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬಾರದ ಕಾರಣ, ಜೀವ ಬೆಂಬಲ ವ್ಯವಸ್ಥೆಯನ್ನ ಅಳವಡಿಸಲಾಗಿದೆ ಎನ್ನಲಾಗುತ್ತಿದೆ.

ಪ್ರಸ್ತುತ ಕೇರ್ನ್ಸ್ ಕ್ಯಾನ್ಬೆರಾದಲ್ಲಿರುವ ಆಸ್ಪತ್ರೆಯಲ್ಲಿದ್ದಾರೆ. ಅವರನ್ನು ಶೀಘ್ರವೇ ಸಿಡ್ನಿಗೆ ಸ್ಥಳಾಂತರಿಸಲಾಗುವುದು ಎನ್ನಲಾಗುತ್ತಿದೆ. ನ್ಯೂಜಿಲೆಂಡ್ ಮಾಜಿ ಆಟಗಾರನ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪವಿದ್ದು, ಈ ಕಾರಣದಿಂದಾಗಿಯೇ, ಆರ್ಥಿಕ ಸ್ಥಿತಿ ಹದಗೆಟ್ಟಿತ್ತು ಎನ್ನಲಾಗುತ್ತಿದೆ

ಕೇರ್ನ್ಸ್ 62 ಟೆಸ್ಟ್ ಮತ್ತು 215 ಏಕದಿನ ಪಂದ್ಯಗಳನ್ನ ಆಡಿದ್ದಾರೆ. 2000 ರಲ್ಲಿ ವಿಸ್ಡನ್ ಅವರಿಂದ ವರ್ಷದ 5 ಆಟಗಾರ ರಲ್ಲಿ ಒಬ್ಬನೆಂದು ಹೆಸರಿಸಲ್ಪಟ್ಟರು. 2004ರಲ್ಲಿ ಆಲ್‌ರೌಂಡರ್ ಆಗಿ 200 ವಿಕೆಟ್ ಕಬಳಿಸಿದರು. ಇನ್ನು 3,000 ರನ್ ಗಳಿಸಿದ ಆರನೇ ಆಟಗಾರರಾಗಿದ್ದಾರೆ.