ಮುಂಬೈ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಆಲ್ರೌಂಡರ್ ಯೂಸುಫ್ ಪಠಾಣ್ ಗೂ ಕೋವಿಡ್ ಸೋಂಕು ದೃಢವಾಗಿದೆ. ಈ ಬಗ್ಗೆ ಯೂಸುಫ್ ಹೇಳಿಕೊಂಡಿದ್ದು, ವಾರದ ಹಿಂದಷ್ಟೇ ಟೂರ್ನಿಯಲ್ಲಿಆಡಿದ್ದ ಆಟಗಾರರಿಗೆ ಆತಂಕ ಆರಂಭವಾಗಿದೆ.
ಸಚಿನ್ ತೆಂಡೂಲ್ಕರ್, ಯೂಸುಫ್ ಅವರು ರೋಡ್ ಸೇಫ್ಟಿ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡಿದ್ದರು.
ಟ್ವೀಟ್ ಮಾಡಿರುವ ಯೂಸುಫ್ ಪಠಾಣ್, ನನಗೆ ಕೋವಿಡ್ ಪಾಸಿಟಿವ್ ಆಗಿರುವುದು ದೃಢವಾಗಿದೆ. ನಾನು ಸದ್ಯ ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದೇನೆ ಎಂದು ಹೇಳಿದ್ದಾರೆ. ರೋಡ್ ಸೇಫ್ಟಿ# ವರ್ಲ್ಡ್ ಸೀರೀಸ್ ರಾಯ್ ಪುರದಲ್ಲಿ ನಡೆದಿತ್ತು. ಮಾ.21ರಂದು ಫೈನಲ್ ನಡೆದಿದ್ದು, ಇಂಡಿಯಾ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ಆಡಿದ್ದವು. ಫೈನಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಯೂಸುಫ್ ಪಠಾಣ್ ಆಡಿದ್ದರು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ