Sunday, 8th September 2024

ಖಾಲಿ ಕುರ್ಚಿಗಳ ನಡುವೆ ಆರ್‌.ಅಶ್ವಿನ್‌….ಫೋಟೋ ವೈರಲ್‌

ಲಂಡನ್‌: ವಿಶ್ವದ ನಂ. 2 ಟೆಸ್ಟ್​ ಬೌಲರ್​ ಆಗಿರುವ ರವಿಚಂದ್ರನ್‌ ಅಶ್ವಿನ್‌ ತಂಡದಲ್ಲಿ ಸ್ಥಾನ ಪಡೆಯದಿರುವುದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ.

ಈ ನಡುವೆ ಇಂಗ್ಲೆಂಡ್​ನ ಓವಲ್​ ಮೈದಾನದಲ್ಲಿ ಅಶ್ವಿನ್​ ರೂಫ್​ನಲ್ಲಿ ಒಬ್ಬರೇ ಕುಳಿತಿರುವ ಫೋಟೋವೊಂದು ಟ್ವಿಟರ್​ನಲ್ಲಿ ವೈರಲ್​ ಆಗಿದೆ.‌ ಇದೊಂದು ಸಾಮಾನ್ಯ ಫೋಟೋ ಆಗಿದ್ದರೂ ಸಹ ಖಾಲಿ ಕುರ್ಚಿಗಳ ನಡುವೆ ಒಬ್ಬರೇ ಕುಳಿತಿರುವ ಅಶ್ವಿನ್​​ ಫೋಟೋಗೆ ಟ್ವಿಟರ್​ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಸಿಗುತ್ತಿವೆ.

ಟೀಂ ಇಂಡಿಯಾ ಭರವಸೆಯ ಸ್ಪಿನ್ನರ್​ ಆರ್​ ಅಶ್ವಿನ್​​ ಪಟೌಡಿ ಟ್ರೋಫಿಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೇ ಇದ್ದದ್ದು ಚರ್ಚಾ ವಿಷಯವಾಗಿ ಮಾರ್ಪಟ್ಟಿತ್ತು.

ಬಿಸಿಸಿಐ ಆಯ್ಕೆ ಮಾಡಿದ 20 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದ ಅಶ್ವಿನ್​​ ಜೂನ್​​ನಲ್ಲಿ ಸೌತಾಂಪ್ಟನ್​​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಪಂದ್ಯದಲ್ಲಿ ಭಾಗವಹಿಸಿದ್ದಾರೆ. ಇದು ಅಶ್ವಿನ್​ ಭಾಗವಹಿಸಿದ ಏಕೈಕ ಪಂದ್ಯವಾಗಿದೆ.

 

Leave a Reply

Your email address will not be published. Required fields are marked *

error: Content is protected !!