Monday, 16th September 2024

ನಾಟೌಟ್ ಆಗಿ ದಾಖಲೆ ನಿರ್ಮಿಸಿದ ಜೇಮ್ಸ್ ಆಯಂಡರ್ಸನ್

James Anderson

ಅಡಿಲೇಡ್: ಇಂಗ್ಲೆಂಡ್ ಬೌಲಿಂಗ್ ದಿಗ್ಗಜ ಜೇಮ್ಸ್ ಆಯಂಡರ್ಸನ್ ಅವರು ಬ್ಯಾಟಿಂಗ್ ನಲ್ಲಿ ಹೊಸ ದಾಖಲೆ ನಿರ್ಮಿಸಿದರು.

ಸಕ್ರಿಯ ಬೌಲರ್ ಗಳಲ್ಲಿ ಹೆಚ್ಚು ಟೆಸ್ಟ್ ವಿಕೆಟ್ ಹೊಂದಿರುವ ವಿಶ್ವದಾಖಲೆ ಹೊಂದಿರುವ ಆಯಂಡ ರ್ಸನ್, ಬ್ಯಾಟಿಂಗ್ ನಲ್ಲಿ ಹೆಚ್ಚು ಸಲ ನಾಟೌಟ್ ಆದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ. ಆಶಸ್ ಸರಣಿಯ ಅಡಿಲೇಡ್ ಓವಲ್‌’ನಲ್ಲಿ ನಡೆದ ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಮೂರನೇ ದಿನ ಆಂಡರ್ಸನ್ ಬ್ಯಾಟ್‌’ನೊಂದಿಗೆ ಅನನ್ಯ ದಾಖಲೆ ನಿರ್ಮಿಸಿದರು.

ಇಂಗ್ಲೆಂಡ್ 236 ರನ್‌ಗಳಿಗೆ ಆಲೌಟ್ ಆಗುತ್ತಿದ್ದಂತೆ ಕ್ರೀಸ್‌ನಲ್ಲಿ ಅಜೇಯರಾಗಿ ಉಳಿದ ಆಂಡ ರ್ಸನ್ 100 ಬಾರಿ ಟೆಸ್ಟ್ ಇನ್ನಿಂಗ್ಸ್‌ ನಲ್ಲಿ ನಾಟೌಟ್ ಆಗಿ ಉಳಿದ ಮೊದಲ ಬ್ಯಾಟರ್ ಎನಿಸಿ ಕೊಂಡರು.

ವಿಂಡೀಸ್‌ನ ಕರ್ಟ್ನಿ ವಾಶ್ 61 ಬಾರಿ ಅಜೇಯರಾಗಿ ಉಳಿದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮುತ್ತಯ್ಯ ಮುರಳೀಧರನ್ 56 ಸಂದರ್ಭ ಗಳಲ್ಲಿ ಇನ್ನಿಂಗ್ಸ್‌ನಲ್ಲಿ ಔಟಾಗದೆ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಮಾಜಿ ವೇಗಿ ಬಾಬ್ ವಿಲ್ಸ್ 55 ನಾಟೌಟ್ ಇನ್ನಿಂಗ್ಸ್‌ನೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.