Sunday, 15th December 2024

ಏಷ್ಯಾ ಕಪ್ 2022 ರ ಫೈನಲ್‌ ಪಂದ್ಯ ನಾಳೆ

ದುಬೈ: ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಗೆಲುವಿಗಾಗಿ ಫೈನಲ್ ನಲ್ಲಿ ಹೋರಾಡಲಿವೆ. ದುಬೈನ ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಸೆ.11 ರಂದು ಏಷ್ಯಾ ಕಪ್ 2022 ರ ಫೈನಲ್‌ ಮ್ಯಾಚ್ ನಡೆಯಲಿದೆ.

ಸೆ.9ರಂದು ನಡೆದ ಪಂದ್ಯಾಟದಲ್ಲಿ ಶ್ರೀಲಂಕಾ ಪಾಕಿಸ್ತಾನವನ್ನು ಐದು ವಿಕೆಟ್ ಗಳಿಂದ ಸೋಲಿಸಿತ್ತು.

ಬ್ಯಾಟಿಂಗ್ ಪವರ್‌ಪ್ಲೇ ಸಮಯದಲ್ಲಿ ಪಾಕಿಸ್ತಾನದ ವೇಗದ ವಿರುದ್ಧ ಶ್ರೀಲಂಕಾದ ಅಗ್ರ ಕ್ರಮಾಂಕವು ಮೂರು ವಿಕೆಟ್ ನಷ್ಟಕ್ಕೆ ಕೇವಲ 29 ರನ್ ಗಳಿಸಿದ್ದವು. ನಿಸ್ಸಾಂಕ ಅವರು 48 ಎಸೆತಗಳಲ್ಲಿ ಅಜೇಯ 55 ರನ್ ಗಳಿಸಿ ಮೂರು ಓವರ್‌ಗಳು ಉಳಿದಿರು ವಂತೆಯೇ 5 ವಿಕೆಟ್ ನಷ್ಟಕ್ಕೆ 124 ಕ್ಕೆ ತಲುಪಲು ಸಹಾಯ ಮಾಡಿದರು. ನಂತರ ಬ್ಯಾಟಿಂಗ್ ಮಾಡಿದ ಪಾಕಿಸ್ತಾನವು 19.1 ಓವರ್‌ಗಳಲ್ಲಿ 121 ರನ್‌ ಗಳಿಸಿ ಆಲೌಟ್ ಆಯಿತು.

ಪಾಕಿಸ್ತಾನವು 58 ರನ್‌ಗಳಿಗೆ ತನ್ನ ಅಂತಿಮ ಒಂಬತ್ತು ವಿಕೆಟ್‌ಗಳನ್ನು ಕಳೆದು ಕೊಂಡಿತ್ತು.

ಪಂದ್ಯದ ವೇಳಾಪಟ್ಟಿ:

ಪಾಕಿಸ್ತಾನ vs ಶ್ರೀಲಂಕಾ (ಏಷ್ಯಾ ಕಪ್ 2022 ಫೈನಲ್)

ಭಾನುವಾರ, ಸೆಪ್ಟೆಂಬರ್ 11 ಸಂಜೆ 7:30 ಕ್ಕೆ (IST)

ಸ್ಥಳ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ

ಪಾಕಿಸ್ತಾನ-ಶ್ರೀಲಂಕಾ ಸಂಭಾವ್ಯ ಆಟಗಾರರ ಪಟ್ಟಿ:

ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್ (ವಿ.ಕೀ), ಬಾಬರ್ ಅಜಮ್ (ಕ್ಯಾ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಉಸ್ಮಾನ್ ಖಾದಿರ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ಹಸನ್ ಅಲಿ

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿ.ಕೀ), ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ಭಾನುಕಾ ರಾಜಪಕ್ಸೆ, ದಸುನ್ ಶನಕ (ಕ್ಯಾ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಪ್ರಮೋದ್ ಮಧುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ