Sunday, 15th December 2024

ಏಷ್ಯನ್ ಗೇಮ್ಸ್ 2023: ಶೂಟರ್ ನರುಕಾ’ಗೆ ಬೆಳ್ಳಿ ಪದಕ

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್ 2023 ರ ಪುರುಷರ ಸ್ಕೀಟ್ ಫೈನಲ್‌ನಲ್ಲಿ ಭಾರತದ ಶೂಟರ್ ಅನಂತ್ ಜೀತ್ ಸಿಂಗ್ ನರುಕಾ 60 ಶಾಟ್‌ಗಳಲ್ಲಿ 58 ಶಾಟ್‌ ಗಳಿಸಿ ಬೆಳ್ಳಿ ಪದಕ ವನ್ನು ಪಡೆದರು.

ಈ ಸಾಧನೆಯೊಂದಿಗೆ, ಶೂಟಿಂಗ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 12 ಕ್ಕೆ ಏರಿತು ಮತ್ತು 5 ಚಿನ್ನ, 7 ಬೆಳ್ಳಿ ಮತ್ತು 10 ಕಂಚು ಒಳಗೊಂಡಂತೆ ಒಟ್ಟಾರೆ ಪದಕಗಳ ಸಂಖ್ಯೆ 22 ಆಗಿದೆ.

ಕುವೈತ್‌ನ 60 ವರ್ಷದ ಅಬ್ದುಲ್ಲಾ ಅಲ್-ರಶೀದಿ 60/60 ಅಂಕಗಳೊಂದಿಗೆ ಚಿನ್ನ ಗೆದ್ದರು. ರಶೀದಿ 3 ಬಾರಿ ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ

ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ಭಾರತದ ಮೂವರು ಆಟಗಾರರಾದ ಅಂಗದ್ ವೀರ್ ಸಿಂಗ್ ಬಾಜ್ವಾ, ಗುರ್ಜೋತ್ ಖಂಗುರಾ ಮತ್ತು ಅನಂತ್ ಜೀತ್ ಸಿಂಗ್ ನರುಕಾ ಕಂಚಿನ ಪದಕವನ್ನು ಪಡೆದರು.

ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ಆತಿಥೇಯ ಚೀನಾ ಚಿನ್ನದ ಪದಕ ಗೆದ್ದರೆ, ಕತಾರ್ ಬೆಳ್ಳಿ ಗೆದ್ದುಕೊಂಡಿತು.