Saturday, 12th October 2024

ನಾಕೌಟ್ ಹಂತಕ್ಕೆ ಎಟಿಕೆ ಮೋಹನ್ ಬಾಗನ್ ತಂಡ

ಮಾಲ್ಡೀವ್ಸ್: ಮೂರು ಗೋಲು ದಾಖಲಿಸಿದ ಎಟಿಕೆ ಮೋಹನ್ ಬಾಗನ್ ತಂಡವು ಮಜಿಯಾ ಸ್ಪೋರ್ಟ್ಸ್ ಆಂಡ್‌ ರಿಕ್ರಿಯೇಷನ್ಸ್ ತಂಡವನ್ನು ಮಣಿಸಿತು. ಈ ಮೂಲಕ ಟೂರ್ನಿಯಲ್ಲಿ ನಾಕೌಟ್ ಹಂತ ತಲುಪುವತ್ತ ದಿಟ್ಟ ಹೆಜ್ಜೆ ಇಟ್ಟಿತು.

ಶನಿವಾರ ರಾತ್ರಿ ನಡೆದ ಹಣಾಹಣಿಯಲ್ಲಿ 3-1ರಿಂದ ರಾಯ್‌ ಕೃಷ್ಣ ನಾಯಕತ್ವದ ತಂಡವು ಗೆಲುವು ಸಾಧಿಸಿತು. ಇಬ್ರಾಹಿಂ ಐಶ್ರಾಮ್‌ ಅವರು 25ನೇ ನಿಮಿಷದಲ್ಲಿ ಮಜಿಯಾ ಸ್ಪೋರ್ಟ್ಸ್‌ಗೆ ಮೊದಲ ಗೋಲು ಗಳಿಸಿ ಕೊಟ್ಟರು. ಆದರೆ ಲಿಸ್ಟನ್, ರಾಯ್ ಕೃಷ್ಣ ಮತ್ತು ಮನ್ವೀರ್‌ ಸಿಂಗ್‌ ಕ್ರಮವಾಗಿ 48, 63 ಮತ್ತು 77ನೇ ನಿಮಿಷ ಗಳಲ್ಲಿ ಕಾಲ್ಚಳಕ ತೋರುವ ಮೂಲಕ ತಂಡದ ಗೆಲುವಿನ ಸಂಭ್ರಮಕ್ಕೆ ಕಾರಣರಾದರು.

ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಕೋಚ್‌ ಅಂಟೋನಿಯೊ ಹಬಾಸ್‌ ಮಾರ್ಗದರ್ಶನದಲ್ಲಿರುವ ಎಟಿಕೆಎಂಬಿ, ಗುಂಪಿನ ಕೊನೆಯ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಿದರೂ ನಾಕೌಟ್‌ ಸ್ಥಾನ ಖಚಿಪಡಿಸಿಕೊಳ್ಳಲಿದೆ. ಗುಂಪಿನ ಕೊನೆಯ ಪಂದ್ವು ಬಾಂಗ್ಲಾದೇಶದ ಬಶುಂಧರಾ ಕಿಂಗ್ಸ್ ಎದುರು ಮಂಗಳವಾರ ನಡೆಯ ಲಿದೆ. ಬೆಂಗಳೂರು ಎಫ್‌ಸಿ ತಂಡವು ಸ್ಪರ್ಧೆಯಿಂದ ಹೊರಬಿದ್ದಿದೆ.