Tuesday, 7th January 2025

IND vs AUS: ಬ್ರಾಡ್‌ಮನ್‌ ದಾಖಲೆ ಸರಿಗಟ್ಟಿದ ಟ್ರಾವಿಸ್‌ ಹೆಡ್‌

ಅಡಿಲೇಡ್‌: ಆಸ್ಟ್ರೇಲಿಯಾ(IND vs AUS) ತಂಡದ ಎಡಗೈ ಬ್ಯಾಟರ್‌ ಟ್ರಾವಿಸ್‌ ಹೆಡ್‌(Travis Head)ಅವರು ಭಾರತ ವಿರುದ್ಧದ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಸೊಗಸಾದ ಶತಕ ಬಾರಿಸಿಸುವ ಮೂಲಕ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌(Don Bradman ) ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ದ್ವಿತೀಯ ದಿನವಾದ ಶನಿವಾರ ಒಂದು ವಿಕೆಟ್‌ಗೆ 80 ಗಳಿಸಿದ್ದಲ್ಲಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ 11 ರನ್‌ ಒಟ್ಟು ಗೂಡಿಸುವಷ್ಟರಲ್ಲಿ ಆರಂಭಕಾರ ಮೆಕ್‌ಸ್ವೀನಿ(39) ವಿಕೆಟ್‌ ಕಳೆದುಕೊಂಡಿತು. ಇದರ ಬೆನ್ನಲ್ಲೇ ಸ್ಟೀವನ್‌ ಸ್ಮಿತ್‌(2) ವಿಕೆಟ್‌ ಕೂಡ ಪತನಗೊಂಡಿತು. ಈ ವೇಳೆ ಭಾರತ ಪಂದ್ಯದಲ್ಲಿ ಹಿಡಿತ ಸಾಧಿಸಬಹುದೆಂಬು ಊಹಿಸಲಾಯಿತು. ಆದರೆ ಆ ಬಳಿಕ ಕ್ರೀಸ್‌ಗಿಳಿದ ಟ್ರಾವಿಸ್‌ ಹೆಡ್‌ ಭಾರತೀಯ ಬೌಲರ್‌ಗಳನ್ನು ಬೆವರಿಲಿಸುವಂತೆ ಮಾಡಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಕೆಲ ಕಾಲ ಮಾರ್ನಸ್‌ ಬಲುಶೇನ್‌ ಉತ್ತಮ ಸಾಥ್‌ ನೀಡಿದರು.

ಭಾರತೀಯ ಬೌಲರ್‌ಗಳನ್ನು ದಂಡಿಸುತ್ತಲೇ ಹೋದ ಟ್ರಾವಿಸ್‌ ಹೆಡ್‌ 141 ಎಸೆತಗಳಿಂದ 140 ರನ್‌ ಬಾರಿಸಿದರು. ಈ ವೇಳೆ ಸಿಡಿದದ್ದು 17 ಬೌಂಡರಿ ಮತ್ತು 4 ಸಿಕ್ಸರ್‌. ಲಬುಶೇನ್‌ 64 ರನ್‌ ಬಾರಿಸಿದರು. ಉಭಯ ಆಟಗಾರರ ಈ ಜತೆಯಾಟದಿಂದ ಆಸೀಸ್‌ 337 ರನ್‌ ಬಾರಿಸಿ 157 ರನ್‌ಗಳ ಇನಿಂಗ್ಸ್‌ ಲೀಡ್‌ ಸಂಪಾದಿಸಿತು. ಭಾರತ ಪರ ಮೊಹಮ್ಮದ್‌ ಸಿರಾಜ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ತಲಾ 4 ವಿಕೆಟ್‌ ಕಿತ್ತು ಮಿಂಚಿದರು. ನಿತೀಶ್‌ ರೆಡ್ಡಿ ಮತ್ತು ಆರ್‌.ಅಶ್ವಿನ್‌ ತಲಾ ಒಂದು ವಿಕೆಟ್‌ ಪಡೆದರು.

ಇದನ್ನೂ ಓದಿ IPL 2025: ಕೊಹ್ಲಿ ಅಲ್ಲ ಈತನೇ ಆರ್‌ಸಿಬಿಯ ಮುಂದಿನ ನಾಯಕ

ಅಡಿಲೇಡ್‌ ಮೈದಾನದಲ್ಲಿ ಮೂರನೇ ಶತಕ ಬಾರಿಸುವ ಮೂಲಕ ಟ್ರಾವಿಸ್‌ ಹೆಡ್‌ ಮಾಜಿ ಆಟಗಾರ ಬ್ರಾಡ್‌ಮನ್‌ ದಾಖಲೆ ಸರಿಗಟ್ಟಿದರು. ಬ್ರಾಡ್‌ಮನ್‌ ಕೂಡ ಈ ಮೈದಾನದಲ್ಲಿ ಮೂರು ಶತಕ ಬಾರಿಸಿದ್ದಾರೆ. ಅತ್ಯಧಿಕ ಶತಕದ ದಾಖಲೆ ಮೈಕೆಲ್ ಕ್ಲಾರ್ಕ್ ಹೆಸರಿನಲ್ಲಿದೆ. ಅವರು 7 ಶತಕ ಬಾರಿಸಿದ್ದಾರೆ.

ಅಡಿಲೇಡ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಸೀಸ್‌ ಬ್ಯಾಟರ್‌ಗಳು

ಮೈಕೆಲ್ ಕ್ಲಾರ್ಕ್: ಪಂದ್ಯ 10, ಶತಕ 7

ರಿಕಿ ಪಾಂಟಿಂಗ್‌: ಪಂದ್ಯ 17, ಶತಕ 4

ಡೇವಿಡ್ ಬೂನ್: ಪಂದ್ಯ 12, ಶತಕ 4

ಅಲನ್ ಬಾರ್ಡರ್: ಪಂದ್ಯ 12, ಶತಕ 4

ಡೇವಿಡ್‌ ವಾರ್ನರ್‌: ಪಂದ್ಯ 10, ಶತಕ 4

ಡೊನಾಲ್ಡ್‌ ಬ್ರಾಡ್‌ಮನ್‌: ಪಂದ್ಯ 7, ಶತಕ 3

ಟ್ರಾವಿಸ್‌ ಹೆಡ್‌:ಪಂದ್ಯ 7, ಶತಕ 3