ಸಿಡ್ನಿ: ಆಸ್ಟ್ರೇಲಿಯಾದ(AUS vs IND) ಸ್ಟಾರ್ ಬ್ಯಾಟರ್ ಸ್ಟೀವನ್ ಸ್ಮಿತ್(Steve Smith) ಅವರು ಸಿಡ್ನಿ ಟೆಸ್ಟ್‌ನ 3 ನೇ ದಿನದಾಟದ ವೇಳೆ ಕೇವಲ ಒಂದು ರನ್ ಅಂತರದಿಂದ ಟೆಸ್ಟ್‌ನಲ್ಲಿ 10,000 ರನ್‌ಗಳನ್ನು ತಲುಪುವ ಅವಕಾಶವನ್ನು ಕಳೆದುಕೊಂಡರು. ಸ್ಮಿತ್ 9,999 ರನ್ ಗಳಿಸಿದ್ದ ವೇಳೆ ಔಟ್ ಆಗುವ ಮೂಲಕ ನಿರಾಸೆ ಕಂಡರು. ಒಂದೊಮ್ಮೆ ಅವರು 10 ಸಾವಿರ ರನ್ ಪೂರ್ತಿಗೊಳಿಸುತ್ತಿದ್ದರೆ ಈ ಸಾಧನೆಗೈದ ಆಸ್ಟ್ರೇಯಾದ 4ನೇ ಬ್ಯಾಟರ್ ಎನಿಸಿಕೊಳ್ಳುತ್ತಿದ್ದರು.
10 ಸಾವಿರ ರನ್ ಪೂರೈಸಲು ಸ್ಮಿತ್‌ಗೆ 5 ರನ್ ಬೇಕಿತ್ತು. ಆದರೆ 4 ರನ್ ಗಳಿಸಿದ್ದ ವೇಳೆ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಸ್ಲಿಪ್‌ನಲ್ಲಿ ನಿಂತಿದ್ದ ಜೈಸ್ವಾಲ್‌ಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಸ್ಮಿತ್ 10 ಸಾವಿರ ಮೈಲುಗಲ್ಲು ತಲುಪಲು ಮುಂಬರುವ ಶ್ರೀಲಂಕಾ ಸರಣಿ ತನಕ ಕಾಯಬೇಕು. ಲಂಕಾ ಸರಣಿಯಲ್ಲಿ ಒಂದು ರನ್ ಗಳಿಸುತ್ತಿದ್ದಂತೆ ಅವರು 10 ಸಾವಿರ ಟೆಸ್ಟ್ ರನ್‌ಗಳ ಎಲೈಟ್ ಪಟ್ಟಿ ಸೇರಲಿದ್ದಾರೆ.
10 ವರ್ಷದ ಬಳಿಕ ಸರಣಿ ಗೆದ್ದ ಆಸೀಸ್
5 ಪಂದ್ಯಗಳ ಸರಣಿಯಲ್ಲಿ 3-1 ಅಂತರದಿಂದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಬರೋಬ್ಬರಿ 10 ವರ್ಷಗಳ ಬಳಿಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದ ಸಂಭ್ರಮಾಚರಿಸಿತು. ಆಸೀಸ್ ತಂಡ ಕೊನೆಯ ಬಾರಿಗೆ ಈ ಸರಣಿ ಗೆದ್ದದ್ದು 2014-15ರಲ್ಲಿ. ತವರಿನಲ್ಲಿ ನಡೆದಿದ್ದ ಈ ಸರಣಿಯನ್ನು ಕಾಂಗರೂ ಪಡೆ 2-0 ಅಂತರದಿಂದ ಗೆದ್ದಿತ್ತು. ಇದಾದ ಬಳಿಕ ಆಡಿದ ನಾಲ್ಕು ಸರಣಿಯಲ್ಲಿ ಭಾರತವೇ ಗೆದ್ದು ಬೀಗಿತ್ತು.
ಸಿಡ್ನಿಯಲ್ಲಿ ಭಾರತಕ್ಕೆ 2ನೇ ಸೋಲು
ಭಾರತ ತಂಡಕ್ಕೆ ಸಿಡ್ನಿಯಲ್ಲಿ ಎದುರಾದ 2ನೇ ಸೋಲು ಇದಾಗಿದೆ. ಈ ಪಂದ್ಯಕ್ಕೂ ಮುನ್ನ ಭಾರತ ಈ ಕ್ರೀಡಾಂಗಣದಲ್ಲಿ13 ಪಂದ್ಯಗಳನ್ನಾಡಿತ್ತು. 1ರಲ್ಲಿಗೆಲುವು. ಉಳಿದ 5 ಪಂದ್ಯಗಳಲ್ಲಿ ಸೋಲು ಮತ್ತು 7 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು. ಇದೀಗ 2ನೇ ಸೋಲು ಕಂಡಿದೆ. 1978ರಲ್ಲಿ ಬಿಷನ್ ಸಿಂಗ್ ಬೇಡಿ ನಾಯಕತ್ವದಲ್ಲಿ ಭಾರತಕ್ಕೆ ಏಕೈಕ ಗೆಲುವು ಒಲಿದಿತ್ತು.