ಸಿಡ್ನಿ: ಟೀ ಇಂಡಿಯಾ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಆಸೀಸ್ ನಿಗದಿತ ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 374 ರನ್ ಪೇರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಇನ್ನಿಂಗ್ಸ್’ನಲ್ಲಿ ಒಂದು ಅರ್ಧಶತಕ ಹಾಗೂ ಎರಡು ಶತಕಗಳು ಮೂಡಿ ಬಂದವು. ನಾಯಕ ಆರನ್ ಫಿಂಚ್(114) ಬಳಿಕ, ಮಾಜಿ ನಾಯಕ ಸ್ಮಿತ್(105) ಕೂಡ ಶತಕದ ಮೂಲಕ ತಮ್ಮ ಇನ್ನಿಂಗ್ಸ್’ಗೆ ಮೆರುಗು ತಂದರು. ಸ್ಮಿತ್ ಇನ್ನಿಂಗ್ಸ್’ನಲ್ಗಿ 11 ಸಿಕ್ಸರ್ ಸಿಡಿಯಿತು.
ಆರಂಭದಲ್ಲಿ ಆರರ ಸರಾಸರಿಯಲ್ಲಿ ರನ್ ಪೇರಿಸಿದ ಆಸೀಸ್, ಬಳಿಕ ಘಟಾನುಘಟಿಗಳ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರೀ ಮೊತ್ತ ಕಲೆ ಹಾಕಿತು. ಟೀಂ ಇಂಡಿಯಾ ಪರ ವೇಗಿಗಳಾದ ಮೊಹಮ್ಮದ್ ಶಮಿ ಅತ್ಯಧಿಕ ಮೂರು ವಿಕೆಟ್ ಕಬಳಿಸಿದರೆ, ಬುಮ್ರಾ, ಸೈನಿ ತಲಾ ಒಂದು ಹಾಗೂ ಸ್ಪಿನ್ನರ್ ಚಹಲ್ ಒಂದು ವಿಕೆಟ್ ಪಡೆದರು.
ಆರಂಭದಲ್ಲಿ ಮೊನಚಿಲ್ಲದ ಬೌಲಿಂಗಿನಿಂದಾಗಿ ವಿಕೆಟ್ ಪಡೆಯಲು ವಿಫಲವಾದ ಬೌಲರುಗಳು, ಕೊನೆಯಲ್ಲಿ ವಿಕೆಟ್ ಉರುಳಿಸಿ, ಆಸೀಸ್ ಮೊತ್ತವನ್ನು 400 ಗಡಿ ದಾಟದಂತೆ ತಡೆಯಲು ಯಶಸ್ವಿಯಾದರು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ಆರಂಭವಾಗಿದ್ದು ಟಾಸ್ ಗೆದ್ದ ಆಸಿಸ್ ನಾಯಕ ಆಯರೋನ್ ಫಿಂಚ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.