Sunday, 15th December 2024

ನೆದರ್ಲೆಂಡ್ಸ್ ಮೇಲೆ ಅಧಿಪತ್ಯ ಸಾಧಿಸಿದ ಆಸ್ಟ್ರೇಲಿಯಾ

ಟೋಕಿಯೊ: ಪ್ರಬಲ ನೆದರ್ಲೆಂಡ್ಸ್ ಮೇಲೆ ಜಯಗಳಿಸಿದ ಆಸ್ಟ್ರೇಲಿಯಾ ತಂಡ ಒಲಿಂಪಿಕ್ಸ್ ಪುರುಷರ ಹಾಕಿ ಯಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿತು.

ನಿಗದಿತ ಅವಧಿಯ ಪಂದ್ಯ 2-2 ಗೋಲುಗಳಿಂದ ಸಮಬಲವಾದ ನಂತರ ಆಸ್ಟ್ರೇಲಿಯಾ ಶೂಟ್‌ಔಟ್‌ನಲ್ಲಿ 3-0 ಯಿಂದ ಜಯಗಳಿಸಿ, ನೆದರ್ಲೆಂಡ್ಸ್‌ ತಂಡವನ್ನು ಹೊರದೂಡಿತು. ಮಂಗಳವಾರ ಸೆಮಿಫೈನಲ್‌ನಲ್ಲಿ ಕೂಕ ಬುರಾ ಪಡೆ ಜರ್ಮನಿ ಎದುರು ಆಡಲಿದೆ.

ಕಾಂಗರೂ ಪಡೆ ಟಾಮ್‌ ವಿಕ್ಹಾಮ್‌ ಗಳಿಸಿದ ಗೋಲುಗಳಿಂದಧ ಎರಡು ಬಾರಿ ಮುನ್ನಡೆ ಸಾಧಿಸಿತ್ತು. ಆದರೆ ನೆದರ್ಲೆಂಡ್ಸ್‌ ಪರ ಮಿಂಕ್‌ ವಾನ್‌ ಡೆರ್‌ ವೀರ್ಡೆನ್‌ ಮತ್ತು ಜೆರೊನ್‌ ಹರ್ಟ್ಸ್‌ಬರ್ಜರ್‌ ಗಳಿಸಿದ ಗೋಲಿನಿಂದ ತಿರುಗೇಟು ನೀಡಿ ಪಂದ್ಯ ಸಮಬಲವಾಗುವಂತೆ ನೋಡಿಕೊಂಡಿತು.

ಲುಕಾಸ್‌ ವಿಂಡ್‌ಫೆಡರ್ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿ ಜರ್ಮನಿಗೆ ಮುನ್ನಡೆ ಒದಗಿಸಿಕೊಟ್ಟರು. ಕಾರ್ನರ್‌ ಹೊಡೆತದಲ್ಲಿ ಶರವೇಗದಲ್ಲಿ ಧಾವಿಸಿದ ಚೆಂಡು ವಿವಾಲ್ಡಿ ಅವರನ್ನು ವಂಚಿಸಿ ಗೋಲುಪೆಟ್ಟಿಗೆಯ ಎಡಮೂಲೆ ಸೇರಿತು. ನಾಯಕ ಟೊಬಿಯಾಸ್‌ ಹಾಕೆ ಅವರ ಪಾಸ್‌ನಲ್ಲಿ ಟಿಮ್‌ ಹರ್ಟ್ಜ್ ಬ್ರುಕ್ ಗೋಲು ಗಳಿಸಿ ತಂಡದ ಮುನ್ನಡೆ ಉಬ್ಬಿಸಿದರು.

ಜರ್ಮನಿ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ರಿಯೊ ಒಲಿಂಪಿಕ್ಸ್‌ ಚಾಂಪಿಯನ್‌ ಅರ್ಜೆಂಟಿನಾ ತಂಡವನ್ನು 3-1 ಗೋಲುಗಳಿಂದ ಸೋಲಿಸಿದ್ದರು.