Friday, 2nd June 2023

ಆಸ್ಟ್ರೇಲಿಯಕ್ಕೆ ಶ್ರೀಲಂಕಾದ ಸ್ಪಿನ್‌ ಸವಾಲು

ರ್ತ್‌: ಸೋಲಿನ ಆರಂಭ ಕಂಡ ಹಾಲಿ ಚಾಂಪಿಯನ್‌ ಆಸ್ಟ್ರೇಲಿ ಯಕ್ಕೆ ಶ್ರೀಲಂಕಾದ ಸ್ಪಿನ್‌ ಸವಾಲು ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮಂಗಳ ವಾರದ ಏಕೈಕ ಮುಖಾ ಮುಖಿಯಲ್ಲಿ ಇತ್ತಂಡಗಳು ಎದುರಾಗಲಿವೆ.

ಕಾಂಗರೂ ಪಡೆಗೆ ಕಿವೀಸ್‌ 89 ರನ್ನುಗಳ ಬಲವಾದ ಆಘಾತವಿಕ್ಕಿತ್ತು. 17.1 ಓವರ್‌ಗಳಲ್ಲಿ ಆಸೀಸ್‌ 111 ರನ್ನಿಗೆ ಉದುರಿತ್ತು. ಇಂಥದೊಂದು ದೊಡ್ಡ ಸೋಲನ್ನು ಆರನ್‌ ಫಿಂಚ್‌ ಬಳಗ ನಿರೀಕ್ಷಿಸಿಯೇ ಇರಲಿಲ್ಲ. ಈ ಸೋಲಿನಿಂದ ಒಮ್ಮೆಲೇ ಹೊರ ಬರುವುದು ಸುಲಭವಲ್ಲ.

ಇನ್ನೊಂದೆಡೆ ಶ್ರೀಲಂಕಾದ ಆತ್ಮವಿಶ್ವಾಸ ಬಹಳ ಎತ್ತರದಲ್ಲಿದೆ. ವನಿಂದು ಹಸರಂಗ ಟ್ರಂಪ್‌ಕಾರ್ಡ್‌ ಆದಾರು ಎಂಬ ನಂಬಿಕೆ ಹೊಂದಿದೆ. ಈ ವಿಶ್ವಕಪ್‌ನಲ್ಲಿ ಅವರು ಸರ್ವಾ ಧಿಕ 9 ವಿಕೆಟ್‌ ಉರುಳಿಸಿದ್ದಾರೆ. ಹಾಗೆಯೇ ಆಫ್ಸ್ಪಿನ್ನರ್‌ ಮಹೀಶ್‌ ತೀಕ್ಷಣ ಕೂಡ ಅಪಾಯಕಾರಿ.

ದಾಖಲೆಗಳಲ್ಲಿ ಆಸ್ಟ್ರೇಲಿಯ ತುಸು ಮುಂದಿದೆ. ಕಾಂಗರೂ ನೆಲದಲ್ಲಿ ಶ್ರೀಲಂಕಾ ಒಟ್ಟು 14 ಟಿ20 ಪಂದ್ಯಗಳನ್ನಾಡಿದ್ದು, ಆಸ್ಟ್ರೇಲಿಯ 7ರಲ್ಲಿ, ಲಂಕಾ 6ರಲ್ಲಿ ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ. ಇತ್ತಂಡಗಳ 4 ಟಿ20 ವಿಶ್ವಕಪ್‌ ಪಂದ್ಯಗಳಲ್ಲಿ ಆಸೀಸ್‌ ಮೂರನ್ನು ಗೆದ್ದಿದೆ. ಉಳಿದೊಂದು ಪಂದ್ಯ ಲಂಕಾ ಪಾಲಾಗಿದೆ.

error: Content is protected !!