Thursday, 12th December 2024

ಮಾಜಿ ಕ್ರಿಕೆಟಿಗ ಅಜರುದ್ದೀನ್ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

ಜೈಪುರ: ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್ ಕಾರು ಅಪಘಾತಕ್ಕೀಡಾಗಿದ್ದು, ಸ್ವಲ್ಪದ ರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜಸ್ಥಾನದ ಸೂರ್ವಾಲದಲ್ಲಿ ಬುಧವಾರ ಘಟನೆ ನಡೆದಿದೆ.

ಪ್ರಾಣಾಪಾಯದಿಂದ ಬಚಾವ್​ ಆಗಿದ್ದಾರೆಂದು ಅಜರುದ್ದೀನ್​ ಆಪ್ತ ಸಹಾಯಕ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಜರ್​ ರಣಥಂಬೋರ್​ಗೆ ತಮ್ಮ ಕುಟುಂಬದೊಂದಿಗೆ ಆಗಮಿಸುತ್ತಿದ್ದಾಗ ಲಾಲ್ಸೋಟ್​ ಕೋಟಾ ಹೈವೇಯಲ್ಲಿ ಅಪಘಾತ ಸಂಭವಿಸಿದೆ. ಮತ್ತೊಂದು ಕಾರಿನಲ್ಲಿ ಅವರನ್ನು ಹೋಟೆಲ್​ ಕರೆದೊಯ್ಯಲಾಗಿದೆ.

ಅಜರುದ್ದೀನ್​ ಅವರು 99 ಟೆಸ್ಟ್​ ಪಂದ್ಯಗಳನ್ನ ಟೀಮ್​ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. 1992 ರಿಂದ 1999ರವರೆಗಿನ ಮೂರು ಏಕದಿನ ವಿಶ್ವಕಪ್ ಸರಣಿಯನ್ನು ಅಜರ್​ ಟೀಮ್​ ಇಂಡಿಯಾ ನಾಯಕತ್ವ ವಹಿಸಿಕೊಂಡಿದ್ದರು.

1996ರ ವಿಶ್ವಕಪ್​ ಸರಣಿಯಲ್ಲಿ ಅಜರ್​ ಪಡೆ ಸೆಮಿಫೈನಲ್​ಗೆ ಪ್ರವೇಶ ಪಡೆದಿತ್ತು.