ಪ್ಯಾರಿಸ್: ಸ್ಪೇನ್ ನ ಸ್ಟಾರ್ ಆಟಗಾರ, ಮ್ಯಾಂಚೆಸ್ಟರ್ ಸಿಟಿ ಮಿಡ್ ಫೀಲ್ಡರ್ ರೋಡ್ರಿ(Rodri) ಅವರು ಫ್ರಾನ್ಸ್ ಫುಟ್‌ಬಾಲ್ ನಿಯತ ಕಾಲಿಕೆ ನೀಡುವ ಪ್ರತಿಷ್ಠಿತ ಬ್ಯಾಲನ್ ಡಿʼ ಓರ್ ಪ್ರಶಸ್ತಿಯನ್ನು(Ballon d’Or 2024) ತಮ್ಮದಾಗಿಸಿಕೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಈ ಪ್ರಶಸ್ತಿ ಬಾರ್ಸಿಲೋನಾ ಮತ್ತು ಸ್ಪೇನ್ ತಾರೆ ಐತಾನಾ ಬೊನ್ಮತಿ(Aitana Bonmati) ಪಾಲಾಯಿತು. ಇದು ಅವರಿಗೆ ಲಭಿಸಿದ 2ನೇ ಬ್ಯಾಲನ್ ಡಿʼ ಓರ್ ಪ್ರಶಸ್ತಿ.
28 ವರ್ಷ ವಯಸ್ಸಿನ ರೋಡ್ರಿ ಅವರು ಪ್ರಶಸ್ತಿ ರೇಸ್‌ನಲ್ಲಿ ರಿಯಲ್ ಮ್ಯಾಡ್ರಿಡ್ ಆಟಗಾರರಾದ ವಿನಿಶಿಯಸ್ ಜ್ಯೂನಿಯರ್, ಜ್ಯೂಡ್ ಬೆಲ್ಲಿಂಗ್ ಹ್ಯಾಮ್ ಅವರನ್ನು ಹಿಂದಿಕ್ಕಿದರು. ಕಳೆದ ಸೀಸನ್‌ನಲ್ಲಿ ಸತತ ನಾಲ್ಕನೇ ಬಾರಿಗೆ ಮ್ಯಾಂಚೆಸ್ಟರ್ ಸಿಟಿ ತಂಡ ಪ್ರಿಮಿಯರ್ ಲೀಗ್ ಪ್ರಶಸ್ತಿ ಗೆಲ್ಲುವಲ್ಲಿ ರೋಡ್ರಿ ಅದ್ಭುತ ಕೊಡುಗೆ ನೀಡಿದ್ದರು.
1990 ರಲ್ಲಿ ಸ್ಪೇನ್‌ನ ಲೋಥರ್ ಮ್ಯಾಥೌಸ್ ನಂತರ ಬ್ಯಾಲನ್ ಡಿ’ಓರ್ ಗೆದ್ದ ಮೊದಲ ಮಿಡ್‌ಫೀಲ್ಡರ್ ರೋಡ್ರಿ. ಇದಕ್ಕೂ ಮುನ್ನ ಆಲ್ಫ್ರೆಡೋ ಡಿ ಸ್ಟೆಫಾನೊ (1957 ಮತ್ತು 1959) ಹಾಗು ಲೂಯಿಸ್ ಸೌರೆಜ್ (1960) ಬ್ಯಾಲನ್ ಡಿ’ಓರ್ ಪ್ರಶಸ್ತಿನ್ನು ಗೆದ್ದಿದ್ದರು.
ಈ ಬಾರಿ ಫುಟ್‌ಬಾಲ್ ದಿಗ್ಗಜರಾದ ಲಿಯೋನೆಲ್ ಮೆಸ್ಸಿ ಅಥವಾ ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ನಾಮನಿರ್ದೇಶನ ಪಟ್ಟಿಯಿಂದ ಹೊರಗಿಡಲಾಗಿತ್ತು. 2008 ರಿಂದ ಇದು ಮೂರನೇ ಬಾರಿಗೆ ಲಿಯೋನೆಲ್ ಮೆಸ್ಸಿ ಅಥವಾ ಕ್ರಿಸ್ಟಿಯಾನೊ ರೊನಾಲ್ಡೊ ಹೊರತುಪಡಿಸಿ ಬೇರೆ ಆಟಗಾರ ಪ್ರಶಸ್ತಿಯನ್ನು ಗೆದ್ದಿರುವುದು. ಅಲ್ಲದೆ, 2003 ರ ನಂತರ ಮೊದಲ ಬಾರಿಗೆ ಇಬ್ಬರು ಸ್ಟಾರ್ ಆಟಗಾರರು ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
ಇದನ್ನೂ ಓದಿ IND vs NZ: ಮೂರನೇ ಪಂದ್ಯಕ್ಕೂ ವಿಲಿಯಮ್ಸನ್ ಅಲಭ್ಯ
1990 ರಲ್ಲಿ ಸ್ಪೇನ್‌ನ ಲೋಥರ್ ಮ್ಯಾಥೌಸ್ ನಂತರ ಬ್ಯಾಲನ್ ಡಿ’ಓರ್ ಗೆದ್ದ ಮೊದಲ ಮಿಡ್‌ಫೀಲ್ಡರ್ ರೋಡ್ರಿ. ಇದಕ್ಕೂ ಮುನ್ನ ಆಲ್ಫ್ರೆಡೋ ಡಿ ಸ್ಟೆಫಾನೊ (1957 ಮತ್ತು 1959) ಹಾಗು ಲೂಯಿಸ್ ಸೌರೆಜ್ (1960) ಬ್ಯಾಲನ್ ಡಿ’ಓರ್ ಪ್ರಶಸ್ತಿನ್ನು ಗೆದ್ದಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೋಡ್ರಿ, ಈ ಪ್ರಶಸ್ತಿಯು ಸ್ಪೇನ್ ಫುಟ್‌ಬಾಲ್‌ಗೆ ಸಂದ ಜಯವಾಗಿದೆ. ನಾನು ಯಾವದೇ ಸಾಮಾಜಿಕ ಜಾಲತಾಣದಲ್ಲಿ ಇಲ್ಲದ ಕಾರಣ, ನನ್ನ ಬಗ್ಗೆ ಜನರು ಹೆಚ್ಚು ತಿಳಿದಿಲ್ಲ. ನಾನು ಕ್ರೀಡೆಯನ್ನು ಆನಂದಿಸುತ್ತೇನೆ. ಪ್ರಶಸ್ತಿ ಒಲಿದಿದ್ದು ಸಂತಸ ತಂದಿದೆ ಎಂದು ಹೇಳಿದರು. ಎಮಿಲಿಯಾನೊ ಮಾರ್ಟಿನೆಜ್ ಅತ್ಯುತ್ತಮ ಗೋಲ್‌ಕೀಪರ್ ಪ್ರಶಸ್ತಿಯನ್ನು ಗೆದ್ದರೆ, ಹ್ಯಾರಿ ಕೇನ್ ಮತ್ತು ಕೀಲಿಯಾನ್ ಎಂಬಪ್ಪೆ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ್ದಕ್ಕಾಗಿ ಗೆರ್ಡ್ ಮುಲ್ಲರ್ ಟ್ರೋಫಿಯನ್ನು ಪಡೆದರು.