Saturday, 10th June 2023

ಬಾಂಗ್ಲಾ ಕ್ರಿಕೆಟಿಗ ತಮೀಮ್ ಇಕ್ಬಾಲ್’ಗೆ ದಂಡ

ದುಬೈ: ಔಟಾಗಿ ಕ್ರೀಸ್ ಬಿಡುವ ಮುನ್ನ ಅವಾಚ್ಯ ಪದಗಳನ್ನು ಬಳಸಿದ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಪಂದ್ಯ ಶುಲ್ಕದ 15 ಶೇಕಡಾ ಮೊತ್ತ ಕಳೆದುಕೊಳ್ಳಲಿದ್ದಾರೆ.

ವಿಶ್ವಕಪ್ ಸೂಪರ್ ಲೀಗ್ ಸರಣಿಯ ಅಂಗವಾಗಿ ಶ್ರೀಲಂಕಾ ವಿರುದ್ಧ ಢಾಕಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಅವರು ಅಶಿಸ್ತು ತೋರಿದ್ದರು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ತಿಳಿಸಿದೆ.

ಐಸಿಸಿ ನಿಯಮಾವಳಿಯ ಕಾಯ್ದೆ 2.3ರ ಅನ್ವಯ ತಮೀಮ್ ಇಕ್ಬಾಲ್ ತಪ್ಪಿತಸ್ಥ ಎಂಬುದು ಸಾಬೀತಾಗಿದೆ. ದಂಡದೊಂದಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.

ಶುಕ್ರವಾರ ನಡೆದ ಮೂರನೇ ಪಂದ್ಯದ ಬಾಂಗ್ಲಾದೇಶ ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಕೀಪರ್‌ಗೆ ಕ್ಯಾಚ್ ನೀಡಿ ಔಟಾಗಿದ್ದರು. ಕ್ರೀಸ್ ಬಿಡುವ ಮುನ್ನ ತಮೀಮ್ ಅಸಾಂವಿಧಾನಿಕ ಪದ ಬಳಸಿದ್ದರು. ಪಂದ್ಯದ ರೆಫರಿ ನೀಯಮುರ್ ರಶೀದ್ ಅವರು ನೀಡಿರುವ ತೀರ್ಪನ್ನು ತಮೀಮ್ ಒಪ್ಪಿಕೊಂಡಿದ್ದಾರೆ.

error: Content is protected !!