Saturday, 23rd November 2024

ಬಿಸಿಸಿಐ ಕೇಂದ್ರ ಗುತ್ತಿಗೆ: ’ಎ’ ಪ್ಲಸ್ ಗ್ರೇಡ್‌ನಲ್ಲಿ ಮುಂದುವರಿದ ಕೊಹ್ಲಿ, ರೋಹಿತ್‌, ಬೂಮ್ರಾ

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮಧ್ಯಮ ವೇಗಿ ಜಸ್‌ಪ್ರೀತ್ ಬೂಮ್ರಾ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕೇಂದ್ರಿಯ ಗುತ್ತಿಗೆಯ ’ಎ’ ಪ್ಲಸ್ ಗ್ರೇಡ್‌’ನಲ್ಲೇ ಮುಂದುವರಿದಿದ್ದಾರೆ.

ಮೂವರು ಆಟಗಾರರೂ ತಲಾ ₹ 7 ಕೋಟಿ ವಾರ್ಷಿಕ ಸಂಭಾವನೆ ಪಡೆಯ ಲಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ‘ಬಿ’ ಗುಂಪಿನಿಂದ ‘ಎ’ ಗ್ರೇಡ್‌ಗೆ ಬಡ್ತಿ ಪಡೆದಿದ್ದಾರೆ.

ಗುತ್ತಿಗೆ ಪಟ್ಟಿಯಲ್ಲಿ ಒಟ್ಟು 28 ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಲ್ಲಿ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಮತ್ತು ಮಧ್ಯಮವೇಗಿ ಮೊಹಮ್ಮದ್ ಸಿರಾಜ್ ಅವರು ಇದೇ ಮೊದಲ ಸಲ ಸ್ಥಾನ ಪಡೆದುಕೊಂಡಿದ್ದಾರೆ. ’ಸಿ’ ಗ್ರೇಡ್ ನಲ್ಲಿರುವ ಇವರಿ ಬ್ಬರೂ ತಲಾ ಒಂದು ಕೋಟಿ ರೂಪಾಯಿ ಪಡೆಯ ಲಿದ್ದಾರೆ. ಕನ್ನಡಿಗ ಕೆ.ಎಲ್.ರಾಹುಲ್ ’ಎ’ ಗ್ರೇಡ್ ಮತ್ತು ಮಯಂಕ್ ಅಗರ ವಾಲ್ ’ಬಿ’ ಗ್ರೇಡ್‌ನಲ್ಲಿದ್ದಾರೆ. ಇವರಿಬ್ಬರೂ ಕ್ರಮವಾಗಿ ಐದು ಮತ್ತು ಮೂರು ಕೋಟಿ ಪಡೆಯುವರು.

ಎ ಪ್ಲಸ್ (₹ 7 ಕೋಟಿ): ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ
ಎ (₹ 5 ಕೋಟಿ): ಆರ್. ಅಶ್ವಿನ್, ರವೀಂದ್ರ ಜಡೇಜ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶಿಖರ್ ಧವನ್, ಕೆ.ಎಲ್. ರಾಹುಲ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ
ಬಿ (₹ 3 ಕೋಟಿ): ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ಮಯಂಕ್ ಅಗರವಾಲ್
ಸಿ (₹ 1 ಕೋಟಿ): ಕುಲದೀಪ್ ಯಾದವ್, ನವದೀಪ್ ಸೈನಿ, ದೀಪಕ್ ಚಾಹರ್, ಶುಭಮನ್ ಗಿಲ್, ಹನುಮವಿಹಾರಿ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್