Wednesday, 8th January 2025

Virat Kohli-Rohit sharma ಟೆಸ್ಟ್‌ ನಿವೃತ್ತಿ ಯಾವಾಗ? ಮೂಲಗಳು ಹೇಳಿದ್ದಿದು!

BCCI In A Fix Over Virat Kohli-Rohit Sharma Test Retirement Decision? Report Makes Huge Claim

ನವದೆಹಲಿ: ಆಸ್ಟ್ರೇಲಿಯಾ ವಿರುದ್ದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ (Virat Kohli-Rohit sharma) ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಈ ಇಬ್ಬರ ಟೆಸ್ಟ್‌ ನಿವೃತ್ತಿ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಐದನೇ ಹಾಗೂ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ರೋಹಿತ್‌ ಶರ್ಮಾ ಹೊರಗುಳಿದಿದ್ದರು. ಈ ವೇಳೆ ರೋಹಿತ್‌ ಶರ್ಮಾ ಅವರ ಟೆಸ್ಟ್‌ ವೃತ್ತಿ ಜೀವನ ಮುಗಿದಿತ್ತು ಎಂದು ಹೇಳಲಾಗಿತ್ತು. ಆದರೆ, ರೋಹಿತ್‌ ಶರ್ಮಾ ಅವರೇ ಸ್ವತಃ ತಾವು ನಿವೃತ್ತಿ ಪಡೆಯುವುದಿಲ್ಲವೆಂದು ಹೇಳಿದ್ದರು.

ಮೊದಲನೇ ಟೆಸ್ಟ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಹೊರತಾಗಿಯೂ ವಿರಾಟ್‌ ಕೊಹ್ಲಿ ಇನ್ನುಳಿದ ಪಂದ್ಯಗಳಲ್ಲಿ ಕನಿಷ್ಠ ಅರ್ಧಶತಕವನ್ನು ಸಿಡಿಸಲು ಸಾಧ್ಯವಾಗಲಿಲ್ಲ. ಅವರು ಆಡಿದ್ದ ಎಂಟು ಇನಿಂಗ್ಸ್‌ಗಳಿಂದ 23.75ರ ಸರಾಸರಿಯಲ್ಲಿ 190 ರನ್‌ಗಳನ್ನು ಗಳಿಸಿದ್ದರು. ಅದರಲ್ಲಿಯೂ ಅವರು ಆಸ್ಟ್ರೇಲಿಯಾ ತಂಡದ ಬೌಲರ್‌ಗಳ ಆಫ್‌ಸ್ಟಂಪ್‌ ಹೊರಗಡೆಯ ಎಸೆತಗಳ ರಣತಂತ್ರಕ್ಕೆ ವಿರಾಟ್‌ ಕೊಹ್ಲಿ ವಿಕೆಟ್‌ ಒಪ್ಪಿಸಿದ್ದರು. ಆದರೆ, ರೋಹಿತ್‌ ಶರ್ಮಾ ಅವರ ಸಂಗತಿಗಳು ಇನ್ನೂ ಕಠಿಣವಾಗಿವೆ. ಟೀಮ್‌ ಇಂಡಿಯಾ ನಾಯಕ ಆಡಿದ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 31 ರನ್‌ಗಳು ಮಾತ್ರ. ಆದರೆ, ಐದನೇ ಹಾಗೂ ಸಿಡ್ನಿ ಟೆಸ್ಟ್‌ನಿಂದ ಅವರನ್ನು ಕೈ ಬಿಡಲಾಗಿತ್ತು.

ಆದರೆ, ದೈನಿಕ್‌ ಜಾಗರಣ್‌ ವರದಿಯ ಪ್ರಕಾರ, ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸದ್ಯ ಟೆಸ್ಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಸಾಧ್ಯತೆ ಇಲ್ಲ. ಏಕೆಂದರೆ ಈ ಇಬ್ಬರೂ ಸ್ಟಾರ್‌ ಬ್ಯಾಟ್ಸ್‌ಮನ್‌ಗಳನ್ನು ತಂಡದಿಂದ ಕೈ ಬಿಡುವುದು ಅತ್ಯಂತ ಕಠಿಣ ಸಂಗತಿಯಾಗಿದೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಕೊಹ್ಲಿ ಮತ್ತು ರೋಹಿತ್‌ ಶರ್ಮಾರ ಪ್ರದರ್ಶನದ ಬಗ್ಗೆ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಅಸಮಾಧಾನ ಇರುವುದು ನಿಜ.

ವಿರಾಟ್‌ ಕೊಹ್ಲಿ-ರೋಹಿತ್‌ ಶರ್ಮಾರ ಟೆಸ್ಟ್‌ ನಿವೃತ್ತಿ ಯಾವಾಗ?

“ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ಸಹ ಸೋಲಿನಿಂದ ಅತೃಪ್ತಿಯನ್ನು ಹೊಂದಿದೆ. ಬದಲಾವಣೆಯ ಕಠಿಣ ಹಂತದಲ್ಲಿರುವ ತಂಡವು ಈಗ ತವರಿಗೆ ಮರಳಿದ ನಂತರ ಸಾಕಷ್ಟು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಿವೃತ್ತಿ ಬಗ್ಗೆ ಕೇಳಿದಾಗ, ಸುನೀಲ್‌ ಗವಾಸ್ಕರ್‌ ಮತ್ತು ಇರ್ಫಾನ್‌ ಪಠಾಣ್‌ ಅವರ ಮಾತುಗಳನ್ನು ನಾನು ಕೇಳಿಸಿಕೊಂಡಿದ್ದೇನೆಂದು ಅವರು ಹೇಳಿದ್ದಾರೆ. ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ನಿವೃತ್ತಿ ಬಗ್ಗೆ ಕೇಳಿದಾಗ, ಈ ಇಬ್ಬರೂ ನಿವೃತ್ತಿ ಪಡೆಯುವ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲ ಎಂದಿದ್ದಾರೆ. ಬಿಸಿಸಿಐ ಕೂಡ ಈ ಬಗ್ಗೆ ಅವರನ್ನು ಕೇಳುವುದಿಲ್ಲ. ಆದರೆ, ತಂಡದ ಉತ್ತಮ ಭವಿಷ್ಯಕ್ಕಾಗಿ ಏನಾದರೂ ಮಾಡಬೇಕಾಗಿದೆ. ಸೂಕ್ತ ಸಮಯ ಬಂದಾಗ ಸೆಲೆಕ್ಟರ್‌ಗಳು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ,” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: ICC Champions Trophy: ಜನವರಿ 12ಕ್ಕೆ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡ ಪ್ರಕಟ!

Leave a Reply

Your email address will not be published. Required fields are marked *