ನವದೆಹಲಿ: ಪ್ರಸಕ್ತ ವರ್ಷದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI Profit) ಆದಾಯದಲ್ಲಿ ಹೆಚ್ಚಳವಾಗಿದೆ. 4200 ಕೋಟಿ ರೂ. ಗಳು ಹೆಚ್ಚುವರಿಯಾಗಿ ಬಂದಿದ್ದು, ಒಟ್ಟಾರೆ 2024ರಲ್ಲಿ ಬಿಸಿಸಿಐಗೆ 20,686 ಕೋಟಿ ರೂ. ಗಳ ಆದಾಯ ಬಂದಿದೆ. ಇದರಲ್ಲಿ ವಿಶೇಷವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿ ಹಾಗೂ ದ್ವಿಪಕ್ಷೀಯ ಸರಣಿಗಳ ಮಾಧ್ಯಮ ಪ್ರಸಾರದ ಹಕ್ಕುಗಳಿಂದ ಬಿಸಿಸಿಐಗೆ ಹೆಚ್ಚಿನ ಆದಾಯ ಸಂದಾಯವಾಗಿದೆ.
ಭಾರತವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮಾರುಕಟ್ಟೆಯಾಗಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗಳಿಸುವ ಆದಾಯದಲ್ಲಿ ಬಿಸಿಸಿಐ ಸಿಂಹಪಾಲು ಪಡೆಯುತ್ತದೆ. 2022ರ ಜೂನ್‌ನಲ್ಲಿ ಐದು ವರ್ಷಗಳ ಅವಧಿಗೆ ಐಪಿಎಲ್ ಮಾಧ್ಯಮ ಹಕ್ಕುಗಳನ್ನು 48,390 ಕೋಟಿ ರೂ. ಗಳಿಗೆ ಮಾರಾಟ ಮಾಡಲಾಗಿತ್ತು.
“ಬಿಸಿಸಿಐನ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ 2023ರ ಫೈನಾನ್ಸ್ ವರ್ಷದಲ್ಲಿದ್ದ 16,493 ಕೋಟಿ ರೂ.ಗಳು, 2024ರ ಫೈನಾನ್ಸ್ ವರ್ಷಕ್ಕೆ 20,686 ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ಅಂದರೆ ಸರಿ ಸುಮಾರು 4,200 ಕೋಟಿ ರೂ. ಗಳಷ್ಟು ಹೆಚ್ಚಳವಾಗಿದೆ,” ಎಂದು ಬಿಸಿಸಿಐ ದಾಖಲೆಯನ್ನು ಆಧರಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಿಸಿಸಿಐ 2023-24ರ ಆರ್ಥಿಕ ಸಾಲಿನಲ್ಲಿ 7,476 ಕೋಟಿ ಗಳಿಸುವ ನಿರೀಕ್ಷೆಯಿದೆ ಆದರೆ ವಾಸ್ತವಿಕ ಆದಾಯವು 8,995 ಕೋಟಿ ರೂ. ಸಾಮಾನ್ಯ ನಿಧಿ ಕೂಡ 6,365 ಕೋಟಿಯಿಂದ 7,988 ಕೋಟಿಗೆ ಏರಿಕೆಯಾಗಿದೆ. 2024-25ರ ಆರ್ಥಿಕ ಸಾಲಿನಲ್ಲಿ ಬಿಸಿಸಿಐ 10,054 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ ಮತ್ತು ಒಟ್ಟು ಬಜೆಟ್ ವೆಚ್ಚವನ್ನು 2,348 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.
ಬಿಸಿಸಿಐನ 38 ರಾಜ್ಯಗಳ ಕ್ರಿಕೆಟ್ ಮಂಡಳಿಗಳನ್ನು ಹೊಂದಿದ್ದು, ಇವುಗಳು ವಾರ್ಷಿಕ ಅನುದಾನವನ್ನು ಅವಲಂಬಿಸಿವೆ. ಬಿಸಿಸಿಐನ ದಾಖಲೆಗಳ ಪ್ರಕಾರ ರಾಜ್ಯದ ಪ್ರತಿಯೊಂದು ಕ್ರಿಕೆಟ್ ಮಂಡಳಿಯು ವಾರ್ಷಿಕವಾಗಿ ಸುಮಾರು 499 ಕೋಟಿ ರೂ. ಗಳನ್ನು ಪಡೆಯಲಿವೆ.
ಐಪಿಎಲ್‌ನಿಂದ ಬಿಸಿಸಿಐಗೆ ಆದಾಯ ಹೆಚ್ಚು
ಇಂಡಿಯನ್ ಪ್ರೀಮಿಯರ್ ಲೀಗ್‌ನಂತಹ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಅನ್ನು ನಡೆಸುವುದರಿಂದ ಮತ್ತು ಐಸಿಸಿಯಿಂದ ಪಡೆದ ಹಣದಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ಕಾರಣ, ಭಾರತೀಯ ಕ್ರಿಕೆಟ್ ಮಂಡಳಿಯ ಆದಾಯವು ಯಾವುದೇ ದೇಶದ ಕ್ರಿಕೆಟ್ ಮಂಡಳಿಗಿಂತ ಹೆಚ್ಚು. ಇದರಿಂದ ಬಿಸಿಸಿಐಗೆ ಪ್ರತಿ ವರ್ಷ ಭಾರಿ ಆದಾಯ ಬರುತ್ತಿದೆ. ಇದರ ಪರಿಣಾಮ ಪ್ರತಿ ವರ್ಷ ಬಿಸಿಸಿಐ ಖಾತೆಗೆ ಭಾರಿ ಮೊತ್ತ ಬರುತ್ತಿದೆ.
ಈ ಸುದ್ದಿಯನ್ನು ಓದಿ: ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ತೀವ್ರ ಪೈಪೋಟಿ