Thursday, 12th December 2024

ಬಿಸಿಸಿಐ ಅಂಪೈರ್ ಸುಮಿತ್ ಬನ್ಸಾಲ್ ನಿಧನ

ಮುಂಬೈ: ಬಿಸಿಸಿಐನ ದೆಹಲಿ ಮೂಲದ ಅಂಪೈರ್ ಸುಮಿತ್ ಬನ್ಸಾಲ್ ಭಾನುವಾರ ಹೃದಯಾಘಾತದಿಂದ ನಿಧನರಾದರು.

ಅ.2 ರಂದು ತಮಿಳುನಾಡು ಮತ್ತು ಹಿಮಾಚಲ ಪ್ರದೇಶ ನಡುವಿನ ಅಂಡರ್ -19 ವಿನೂ ಮಂಕಡ್ ಟ್ರೋಫಿ ಪಂದ್ಯದಲ್ಲಿ ಬನ್ಸಾಲ್ ಮುಖಕ್ಕೆ ಪೆಟ್ಟಾಯಿತು. ಆಸ್ಪತ್ರೆಗೆ ದಾಖಲಾದ ಎರಡು ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು. ಆದರೆ ಅವರ ಮುಖ ಊದಿಕೊಂಡಿತ್ತು.

ನಂತರ ಅ.8 ರಂದು ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುಮಿತ್ 2006 ರಿಂದ ಅಂಪೈರಿಂಗ್‌ ವೃತ್ತಿಗೆ ಕಾಲಿಟ್ಟಿದ್ದರು. ಆದರೆ ಇದೀಗ ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ.