Sunday, 8th September 2024

ನೀತಿ ಸಂಹಿತೆ ಉಲ್ಲಂಘನೆ: ಜಸ್ಪ್ರಿತ್ ಬುಮ್ರಾ, ನಿತೀಶ್ ರಾಣಾಗೆ ದಂಡ

ಪುಣೆ: ಮುಂಬೈ ಇಂಡಿಯನ್ಸ ಮತ್ತು ಕೊಲ್ಕತ್ತಾ ನೈಟ್‌ ರೈಡರ್ಸ್ ನಡುವಿನ ಮಹಾರಾಷ್ಟ್ರ ಕ್ರೀಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನೀತಿಶ್ ರಾಣಾ ಅವರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ.

ಬುಮ್ರಾ ಐಪಿಎಲ್ ನೀತಿ ಸಂಹಿತೆಯ ಮೊದಲ ಹಂತದ ಅಪರಾಧ ಒಪ್ಪಿಕೊಂಡಿದ್ದು, ಸದ್ಯಕ್ಕೆ ವಾಗ್ದಂಡನೆ ಹಾಕಲಾಗಿದೆ. ಕೆಕೆಆರ್ ಪ್ಲೇಯರ್ ನಿತೀಶ್ ರಾಣಾಗೆ ದಂಡ ವಿಧಿಸಲಾಗಿದೆ.

ಐಪಿಎಲ್ ನೀತಿ ಸಂಹಿತೆ ಲೆವೆಲ್ 1ನ್ನು ಉಲ್ಲಂಘಿಸಿದ್ದಕ್ಕೆ ಪಂದ್ಯದ ಸಂಭಾವನೆ 10 ಪ್ರತಿಶತ ದಂಡ ಪಾವತಿಸುಂತೆ ರಾಣಾ ಅವರಿಗೆ ತಿಳಿಸಲಾಗಿದೆ. ಬುಮ್ರಾ ಅವರಿಗೆ ಕೇವಲ ಎಚ್ಚರಿಕೆ ನೀಡಲಾಗಿದೆ

ಮುಂಬೈ ಇಂಡಿಯನ್ಸ್ ವಿರುದ್ಧ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಅಬ್ಬರ ಮೆರೆದ ಪ್ಯಾಟ್‌ ಕಮಿನ್ಸ್ 4 ಓವರ್ ಬೌಲ್ ಮಾಡಿ 2 ವಿಕೆಟ್ ಪಡೆದಿದ್ದಲ್ಲದೇ, ವೇಗದ ಅರ್ಧಶತಕದ ದಾಖಲೆ ಮಾಡಿದರು. 162 ರನ್ ಗುರಿ ಬೆನ್ನತ್ತಿದ ಕೆಕೆಆರ್ ಪರ ಅಬ್ಬರದ ಆಟವಾಡಿದ ಪ್ಯಾಟ್ ಕಮಿನ್ಸ್ 14 ಎಸೆತಗಳಲ್ಲಿ ಅರ್ಧ ಶತಕದ ಗಡಿ ಮುಟ್ಟಿದರು.

16ನೇ ಓವರ್‌ನಲ್ಲಿ ಡೇನಿಯಲ್ ಸ್ಯಾಮ್ಸ್ ಬೌಲಿಂಗ್‌ನಲ್ಲಿ 35ರನ್‌ ಕಲೆ ಹಾಕಿದ ಈತ ತಂಡಕ್ಕೆ ನಾಲ್ಕು ಓವರ್ ಬಾಕಿ ಇರುವಂತೆಯೇ ಗೆಲುವು ತಂದು ಕೊಟ್ಟರು. ಈತನ ಇನ್ನಿಂಗ್ಸ್‌ನಲ್ಲಿ ಆರು ಅಮೋಘ ಸಿಕ್ಸರ್‌ಗಳಿದ್ದವು.

error: Content is protected !!