Sunday, 15th December 2024

ಕೇನ್ ವಿಲಿಯಮ್ಸನ್ ನಾಯಕನ ಆಟ, ನ್ಯೂಜಿಲೆಂಡ್’ಗೆ 101 ರನ್ ಜಯ

ಮೌಂಟ್‌ ಮೌಂಗನ್ಯುಯಿ: ಬುಧವಾರ ಮೌಂಟ್‌ಮೌಂಗನ್ಯುಯಿಯ ಬೇ ಓವಲ್‌ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೊದಲನೇ ಟೆಸ್ಟ್‌ನಲ್ಲಿ ಆತಿಥೇಯ ನ್ಯೂಜಿಲೆಂಡ್ 101 ರನ್ ಜಯ ಗಳಿಸಿದೆ. ಕೇನ್ ವಿಲಿಯಮ್ಸನ್ ನಾಯಕನ ಆಟ ಮತ್ತು ಕೈಲ್ ಜೇಮಿಸನ್ ಮಾರಕ ಬೌಲಿಂಗ್‌ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ಮುನ್ನಡೆ ಸಾಧಿಸಲು ನೆರವಾಯಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್, ಆರಂಭಿಕ ಇನ್ನಿಂಗ್ಸ್‌ನಲ್ಲಿ ಕೇನ್ ವಿಲಿಯಮ್ಸನ್ 129, ರಾಸ್ ಟೇಲರ್ 70, ಹೆನ್ರಿ ನಿಕೋಲ್ಸ್ 56, ಬಿಜೆ ವಾಲ್ಟಿಂಗ್ 73, ಕೈಲ್ ಜೇಮಿಸನ್ 32 ರನ್‌ನೊಂದಿಗೆ 431 ರನ್ ಗಳಿಸಿತ್ತು. ಪಾಕಿಸ್ತಾನ ಮೊಹಮ್ಮದ್ ರಿಝ್ವಾನ್ 71, ಫಹೀಮ್ ಅಶ್ರಫ್ 91 ರನ್‌ನೊಂದಿಗೆ 239 ರನ್ ಗಳಿಸಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್, ಟಾಮ್ ಲ್ಯಾಥಮ್ 53, ಟಾಮ್ ಬ್ಲಂಡೆಲ್ 64, ಕೇನ್ ವಿಲಿಯಮ್ಸನ್ 21 ರನ್‌ನೊಂದಿಗೆ 5 ವಿಕೆಟ್ ನಷ್ಟದಲ್ಲಿ 180 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದರೆ, ಪಾಕಿಸ್ತಾನ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಫವಾದ್ ಆಲಂ 102, ಮೊಹಮ್ಮದ್ ರಿಝ್ವಾನ್ 60 ರನ್‌ನೊಂದಿಗೆ 271 ರನ್ ಬಾರಿಸಿ ಶರಣಾಯಿತು.

ಪಾಕಿಸ್ತಾನದ ಶಾಹೀನ್ ಅಫ್ರಿದಿ 4, ಯಾಸಿರ್ ಶಾ 3, ನಸೀಮ್ ಶಾ 4 ವಿಕೆಟ್ ಪಡೆದರೆ, ನ್ಯೂಜಿಲೆಂಡ್‌ನ ಟಿಮ್ ಸೌಥೀ 4, ಟ್ರೆಂಟ್ ಬೌಲ್ಟ್ 4, ಕೈಲ್ ಜೇಮಿಸನ್ 5, ನೀಲ್ ವ್ಯಾಗ್ನರ್ 4, ಮಿಚೆಲ್ ಸ್ಯಾಂಟ್ನರ್ 2 ವಿಕೆಟ್‌ನಿಂದ ಗಮನ ಸೆಳೆದರು.