ಕೋಲಂಬೋ: ಟೀಂ ಇಂಡಿಯಾದ ಸ್ಪಿನ್ನರ್ಗಳಾದ ಯಜುವೇಂದ್ರ ಚಾಹಲ್ ಹಾಗೂ ಕೆ.ಗೌತಮ್ ಕರೋನಾ ಸೋಂಕಿಗೆ ಒಳಗಾಗಿದ್ದಾರೆ.
ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಆಲ್ ರೌಂಡರ್ ಕೃನಾಲ್ ಪಾಂಡ್ಯ ಕರೋನಾ ಸೋಂಕಿಗೆ ಒಳಗಾದ ಮೂರು ದಿನಗಳಲ್ಲಿ ಇನ್ನಿಬ್ಬರು ಆಟಗಾರರು ಸೋಂಕಿಗೆ ಒಳಗಾದಂತಾಗಿದೆ. ಇವರು ಕೃನಾಲ್ರ ಪ್ರಾಥಮಿಕ ಸಂಪರ್ಕಿತರಾದ್ದರಿಂದ ಪ್ರತ್ಯೇಕವಾಗಿ ಇಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಕಳೆದ ಮಂಗಳವಾರ ಕೃನಾಲ್ ಸೋಂಕಿಗೆ ಒಳಗಾಗಿದ್ದಾರೆ ಎಂಬುದು ವರದಿಯಿಂದ ತಿಳಿದು ಬರುತ್ತಿದ್ದಂತೆಯೇ ಪ್ರಥ್ವಿ ಶಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್, ದೀಪಕ್ ಚಹರ್, ಮನೀಷ್ ಪಾಂಡ್ಯ, ಇಶಾನ್ ಕಿಶನ್ ಹಾಗೂ ಕೆ.ಗೌತಮ್ರನ್ನು ಪ್ರಾಥಮಿಕ ಸಂಪರ್ಕಿತರೆಂದು ಪರಿಗಣಿಸಲಾಗಿತ್ತು.
ಈ 8 ಮಂದಿ ಆಟಗಾರರಿಗೆ ಕಳೆದ ಟ್ವೆಂಟಿ 20 ಪಂದ್ಯಗಳಿಂದ ದೂರವಿಡಲಾಗಿತ್ತು. ಟೀಂ ಇಂಡಿಯಾ ತಂಡದಿಂದ ಇವರನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು.