Monday, 25th November 2024

ಟೀಮ್ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಚೇತನ್ ಶರ್ಮಾ ನೇಮಕ

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಚೇತನ್ ಶರ್ಮಾ ರನ್ನು ಗುರುವಾರ ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಚೇತನ್ ಶರ್ಮಾ ಜೊತೆಗೆ ಅಭಯ್ ಕರುವಿಲ್ಲ ಹಾಗೂ ದೆವಾಶಿಶ್ ಮೊಹಾಂತಿ ಅವರನ್ನು ಕೂಡ ಆಯ್ಕೆ ಸಮಿತಿಗೆ ಆಯ್ಕೆ ಮಾಡಿದೆ.

ಮತ್ತೊಮ್ಮೆ ಭಾರತೀಯ ಕ್ರಿಕೆಟ್‌ಗೆ ಸೇವೆಯನ್ನು ಸಲ್ಲಿಸಲು ಅವಕಾಶ ದೊರೆತಿರುವುದು ನನ್ನ ಭಾಗ್ಯ. ನಾನು ಹೆಚ್ಚು ಮಾತನಾ ಡದ ಮನುಷ್ಯ. ನನ್ನ ಕೆಲಸ ಮಾತಿಗಿಂತ ಜೋರಾಗಿ ಧ್ವನಿಸುತ್ತದೆ. ಎಂದು ಚೇತನ್ ಶರ್ಮಾ ತಮ್ಮ ಆಯ್ಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಬಿಸಿಸಿಐಗೆ ಧನ್ಯವಾದವನ್ನು ಮಾತ್ರವೇ ಹೇಳುತ್ತೇನೆ” ಎಂದು ಚೇತನ್ ಶರ್ಮಾ ತಮ್ಮ ಆಯ್ಕೆಯ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಚೇತನ್ 1983ರಿಂದ 1994ರ ಅವಧಿಯಲ್ಲಿ 65 ಏಕದಿನ ಹಾಗೂ 23 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

18ನೇ ವಯಸ್ಸಿನಲ್ಲಿ ಚೇತನ್ ಶರ್ಮಾ ಹರ್ಯಾಣ ತಂಡವನ್ನು ಮೊದಲ ಬಾರಿಗೆ ಪ್ರತಿನಿಧಿಸಿ ಅದೇ ವರ್ಷದಲ್ಲಿ ಭಾರತ ಕ್ರಿಕೆಟ್ ತಂಡಕ್ಕೂ ಆಯ್ಕೆಯಾಗಿ ಪದಾರ್ಪಣೆ ಮಾಡಿದ್ದರು. 1983ರಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾ ರ್ಪಣೆಯನ್ನು ಮಾಡಿದ್ದರು. 1987ರ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆಯನ್ನು ಮಾಡಿದ್ದು ಚೇತನ್ ಶರ್ಮಾ ಅವರ ಕ್ರಿಕೆಟ್ ಬದುಕಿನ ಸ್ಮರಣೀಯ ಅಂಶವಾಗಿದೆ.