Friday, 10th January 2025

National Sports: ಜಾತವಾರ ಹೊಸಹಳ್ಳಿ ಚಿರಂತ್ ಎಂ ಕಶ್ಯಪ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

ರಾಂಚಿಯಲ್ಲಿ 14 ವರ್ಷದೊಳಗಿನ ಕ್ರೀಡಾಕೂಟದಲ್ಲಿ ಶನಿವಾರ ಪ್ರತಿಭಾ ಪ್ರದರ್ಶನ

ಚಿಕ್ಕಬಳ್ಳಾಪುರ : ತಾಲೂಕಿನ ಜಾತವಾರ ಹೊಸಹಳ್ಳಿ ಗ್ರಾಮದ ಚಿರಂತ್ ಎಂ.ಕಶ್ಯಪ್ ಜಾರ್ಖಂಡ್‌ನ ರಾಂಚಿಯಲ್ಲಿ ಶನಿವಾರದಿಂದ ನಡೆಯಲಿರುವ ಎರಡು ದಿನಗಳ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದಕ್ಕೆ ಚಾಂಪಿಯನ್ ಅಥ್ಲೆಟಿಕ್ ಅಕಾಡೆಮಿ ಶುಭವನ್ನು ಕೋರಿದೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಚಿರಂತ್‌ಗೆ ಶುಭಕೋರಿ ಬೀಳ್ಕೊಟ್ಟ ಚಾಂಪಿಯನ್ ಅಥ್ಲೆಟಿಕ್ ಅಕಾಡೆಮಿ ಕ್ರೀಡಾ ಪಟುಗಳು ಮತ್ತು ತರಬೇತುದಾರ ಕೆ.ಚಂದ್ರಕಾAತ್ ಮಾಧ್ಯಮದೊಂದಿಗೆ ಮಾತನಾಡಿದರು.

ಜಾತವಾರ ಹೊಸಹಳ್ಳಿ ಗ್ರಾಮದ ವಕೀಲ ಮಂಜುನಾಥ್, ಶಿಕ್ಷಕಿ ಶ್ರೀದೇವಿ ಅವರ ಪುತ್ರನಾದ ಚಿರಂತ್ ಓದಿನಲ್ಲಿ ಚುರುಕಾಗಿರುವವಂತೆ ಅಥ್ಲೆಟಿಕ್‌ನಲ್ಲಿ ಕೂಡ ಭರವಸೆ ಹುಟ್ಟಿಸಿರುವ ಪ್ರತಿಭಾವಂತ ಆಟಗಾರನಾಗಿದ್ದಾನೆ.ನಗರದ ಚಾಂಪಿಯನ್ ಅಥ್ಲೆಟಿಕ್ ಅಕಾಡೆಮಿಯ ವಿದ್ಯಾರ್ಥಿಯಾದ ಈತ ನಿತ್ಯವೂ ೨ ಗಂಟೆಗೂ ಹೆಚ್ಚುಕಾಲ ಟ್ರಾಕ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಾನೆ.ಈವೇಳೆ ತರಬೇತುದಾರರು ಹೇಳಿಕೊಡುವ ಅಂಶಗಳನ್ನು ಪಾಲಿಸಿ ಅದರಂತೆ ಅಭ್ಯಾಸ ಮಾಡಿದ್ದರ ಫಲವಾಗಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಜಾರ್ಖಂಡ್‌ನ ರಾಂಚಿಯಲ್ಲಿ ನಡೆಯುತ್ತಿರುವ ೧೪ ವರ್ಷದೊಳಗಿನ ವಯೋಮಾನದ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ-೨೦೨೫ರಲ್ಲಿ ಸ್ಥಾನಪಡೆದು ಆಯ್ಕೆಯಾಗಿರುವುದು ಸಂತೋಷ ತಂದಿದೆ ಎಂದರು.

ನಮ್ಮ ಜಿಲ್ಲೆಯ ಪ್ರತಿಭಾವಂತ ಅಥ್ಲೆಟಿಕ್ ಕ್ರೀಡಾಪಟುವಾಗಿ ಬೆಳೆಯುವ ಭರವಸೆ ಮೂಡಿಸಿರುವ ಚಿರಂತ್ ಸಾಧನೆ ಕಿರಿಯ ಕ್ರೀಡಾಪಟುಗಳಿಗೆ ಮಾದರಿಯಾಗಿದೆ. 600 ಮೀಟರ್ ಓಟದ 14 ವರ್ಷದ ಒಳಗಿನ ಕ್ರೀಡೆಯಲ್ಲಿ ಗೆಲುವು ಕಾಣುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಲಿ,ಆಮೂಲಕ ಗುರುಗಳಿಗೆ ತಂದೆತಾಯಿಗಳಿಗೆ ಕೀರ್ತಿತರಲಿ ಎಂಬುದು ರಾಷ್ಟ್ರೀಯ 400 ಮೀಟರ್ ಓಟದಲ್ಲಿ ಗೋಲ್ಡ್ ಮೆಡಲ್ ಪಡೆದ ಹಿರಿಯ ಕ್ರೀಡಾಪಟು ಪ್ರವೀಣ್ ಮಾತಾಗಿದೆ.

ನಗರದ ಚಾಂಪಿಯನ್ ಅಥ್ಲೆಟಿಕ್ ತಂಡದ ತರಬೇತುದಾರ ಕೆ.ಚಂದ್ರಕಾಂತ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿರುವ ಹತ್ತಾರು ಕ್ರೀಡಾ ಪ್ರತಿಭೆಗಳು ಈಗಾಗಲೇ ಜಿಲ್ಲಾ ರಾಜ್ಯ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅತ್ಯುತ್ತಮ ಸ್ಥಾನ ಪಡೆದಿದ್ದಾರೆ.

ಶುಕ್ರವಾರ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಂಚಿಗೆ ಪ್ರಯಾಣ ಬೆಳೆಸಿರುವ  ಚಿರಂತ್ ಎಂ ಕಶ್ಯಪ್ ಸಹ ಉತ್ತಮ ಸಾಧನೆ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮೆರೆಸಲಿ ಎಂಬುದು ಕ್ರೀಡಾಪ್ರೇಮಿಗಳ ಆಶಯವಾಗಿದೆ.

ಇದನ್ನೂ ಓದಿ: #StarSports

Leave a Reply

Your email address will not be published. Required fields are marked *