ಚೆನ್ನೈ: ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳಪೆ ನಿರ್ವಹಣೆಯಿಂದ ನರಳುತ್ತಿದೆ. ಕೇವಲ ಎರಡು ಅಂಕಗಳೊಂದಿಗೆ ಕೊನೆ ಸ್ಥಾನದಲ್ಲಿದೆ.
ಐಪಿಎಲ್‌ನಲ್ಲಿ 3 ಪಂದ್ಯಗಳಲ್ಲಿ 2 ಸೋಲುಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ಆತಂಕದಲ್ಲಿದೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಹಿರಿಯ ಅನುಭವಿ ಆಟಗಾರರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರನ್ನು ತಂಡದಿಂದ ತೆಗೆದು ಹಾಕಲು ತಯಾರಿ ನಡೆಸುತ್ತಿದೆ. ವರದಿಗಳ ಪ್ರಕಾರ, ಈ ಇಬ್ಬರು ಆಟಗಾರರ ಒಪ್ಪಂದವನ್ನು ಕೊನೆಗೊಳಿಸಲು ಸಿಎಸ್ಕೆ ಸಿದ್ಧತೆ ನಡೆಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಈ ಇಬ್ಬರು ಆಟಗಾರರನ್ನು ತಂಡದಿಂದ ತೆಗೆದು ಹಾಕುವ ಪ್ರಕ್ರಿಯೆ ಪ್ರಾರಂಭಿಸಿದೆ. ಸಿಎಸ್ಕೆ ಇಬ್ಬರ ಹೆಸರನ್ನು ತಮ್ಮ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದು ಹಾಕಿದೆ.
ಸುರೇಶ್ ರೈನಾ ಜೊತೆ 11 ಕೋಟಿ ಹಾಗೂ ಹರ್ಭಜನ್ ಸಿಂಗ್ ಜೊತೆ 2 ಕೋಟಿ ರೂಪಾಯಿ ಒಪ್ಪಂದವನ್ನು ಸಿಎಸ್ಕೆ ಮಾಡಿತ್ತು. ಆದ್ರೆ ಇಬ್ಬರೂ ಆಟಗಾರರು ಐಪಿಎಲ್ ನಿಂದ ಹೊರ ಬಿದ್ದಿರುವ ಕಾರಣ ಇವರಿಗೆ ಯಾವುದೇ ಹಣ ಸಿಗುವುದಿಲ್ಲ. ಇಬ್ಬರು ಆಟಗಾರರು ಮುಂದಿನ ಬಾರಿ ಬೇರೆ ತಂಡ ಸೇರುವ ಸಾಧ್ಯತೆಯಿದೆ.