ದೋಹಾ : ಫುಟ್ಬಾಲ್ ಆಟಗಾರ ಥಾಮಸ್ ಮುಲ್ಲರ್ಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಥಾಮಸ್ ಮುಲ್ಲರ್ ಅವರು ದೋಹಾದಲ್ಲಿ ನಡೆದ ಫಿಫಾ ಕ್ಲಬ್ ವಿಶ್ವಕಪ್ ವೇಳೆ ಕೊರೊನಾ ಪರೀಕ್ಷೆ ನಡೆಸಿದ್ದರು. ಈ ವೇಳೆ ಕೊರೊನಾ ಸೋಂಕು ತಗುಲಿದೆ. ವಿಷಯ ತಿಳಿದ ಕೂಡಲೇ ಮುಲ್ಲರ್ ತಂಡದಿಂದ ಪ್ರತ್ಯೇಕವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಲ್ಲರ್ಗೆ ಕೊರೊನಾ ದೃಢಪಟ್ಟ ಹಿನ್ನೆಲೆ ತಂಡದ ಎಲ್ಲಾ ಆಟಗಾರರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಯಾವುದೇ ಪ್ರಕರಣ ಪತ್ತೆಯಾಗಿಲ್ಲ.