Thursday, 12th December 2024

ಟಿ.ನಟರಾಜನ್’ಗೆ ಕರೋನಾ ಸೋಂಕು

ದುಬೈ: ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ.ನಟರಾಜನ್ ಅವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಇಂದು ಸನ್ ರೈಸ್ ತಂಡ ಕಣಕ್ಕಿಳಿಯಲಿದೆ.

ಐಪಿಎಲ್‌ನ 33ನೇ ಪಂದ್ಯವು ಇಂದು ರಾತ್ರಿ 7.30 ರಿಂದ ದುಬೈನಲ್ಲಿ ನಡೆಯಲಿದೆ. ಸನ್ ರೈಸರ್ಸ್ ಹೈದರಾಬಾದ್ ಪತ್ರಿಕಾ ಪ್ರಕಟಣೆಯ ಪ್ರಕಾರ, ತಂಡದ ವೇಗದ ಬೌಲರ್ ಟಿ ನಟರಾಜನ್ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕರೋನಾ ಪಾಸಿಟಿವ್ ಆಗಿದೆ. ಅವರನ್ನು ತಂಡದಿಂದ ಪ್ರತ್ಯೇಕಿಸಲಾಗಿದೆ.

ನಟರಾಜನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಹೈದರಾಬಾದ್‌ನ ಆರು ಸದಸ್ಯರನ್ನು ಕೂಡ ಪ್ರತ್ಯೇಕವಾಗಿ ಇರಿಸಲಾಗಿದೆ.

ನಟರಾಜನ್ ಅವರಿಗೆ ಕೋವಿಡ್ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಅವರನ್ನು ಮತ್ತು ಅವರ ಸಂಪರ್ಕದಲ್ಲಿದ್ದ ಆರು ಮಂದಿಯನ್ನು ಐಸೋಲೇಟ್ ಮಾಡಲಾಗಿದೆ. ವಿಜಯ್ ಶಂಕರ್ (ಆಟಗಾರ), ವಿಜಯ್ ಕುಮಾರ್ (ತಂಡದ ಮ್ಯಾನೇಜರ್), ಶ್ಯಾಮ್ ಸುಂದರ್ (ಚಿಕಿತ್ಸಕ), ಅಂಜನ ವನ್ನನ್ (ವೈದ್ಯ), ತುಶಾರ್, ಪೆರಿಯಾಸಾಮಿ, ಈ ಆರು ಮಂದಿ ಬೌಲರ್ ನಟರಾಜನ್ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.