Thursday, 12th December 2024

ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ’ಗೆ ಕರೋನಾ ಪಾಸಿಟಿವ್

ಬರ್ಮಿಂಗ್‌ಹ್ಯಾಮ್: ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್​ ಶರ್ಮಾ ಅವರಿಗೆ ಕರೊನಾ ಪಾಸಿಟಿವ್​ ಇದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಇಂಗ್ಲೆಂಡ್​ ವಿರುದ್ಧದ 5ನೇ ಟೆಸ್ಟ್​ ಪಂದ್ಯಾವಳಿ ಜುಲೈ 1 ರಿಂದ ಆರಂಭವಾಗ ಲಿದ್ದು, ಸದ್ಯ ನಾಯಕ ಕರೊನಾ ಚಿಕಿತ್ಸೆ ಪಡೆಯು ತ್ತಿರುವುದರಿಂದ ತಂಡ ವನ್ನು ಜಸಪ್ರೀತ್​ ಬುಮ್ರಾ ಅಥವಾ ವಿಕೇಟ್​ ಕೀಪರ್​ ರಿಷಬ್ ಪಂಥ್​ ಪಂದ್ಯ ವನ್ನು ಮುನ್ನಡೆಸುವ ಸಾಧ್ಯತೆ ಇದೆ.

ಸದ್ಯ ಹೋಟೆಲ್​ವೊಂದರಲ್ಲಿ ರೋಹಿತ್​ ಅವರಿಗೆ ಬಿಸಿಸಿಐ ವೈದ್ಯರ ತಂಡದಿಂದಲೇ ವೀಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಾನುವಾರ ಬಿಸಿಸಿಐ ಟ್ವೀಟ್​ ಮೂಲಕ ತಿಳಿಸಿದೆ.