ಕಾಬೂಲ್: ಅಫ್ಘಾನಿಸ್ಥಾನದ ನಂಗಾರ್ಹಾರ್ ಪ್ರಾಂತ್ಯದಲ್ಲಿ ನಡೆದ ಬಾಂಬ್ ದಾಳಿಗೆ ಅಂತಾ ರಾಷ್ಟ್ರೀಯ ಕ್ರಿಕೆಟ್ ಅಂಪಾಯರ್ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಬಲಿಯಾಗಿದ್ದಾರೆ.
ನಂಗರ್ಹಾರ್ ನ ಗವರ್ನರ್ ರ ಮನೆಯ ಎದುರಿನ ರಸ್ತೆಯಲ್ಲಿ ಈ ಸ್ಪೋಟ ನಡೆದಿದೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಬಂದೂಕುಧಾರಿಗಳು ಮನೆಗೆ ನುಗ್ಗಲು ಪ್ರಯತ್ನಿಸಿದ್ದರು, ಕೂಡಲೇ ಭದ್ರತಾ ಪಡೆಗಳು ಅವರನ್ನು ಹೊಡೆದುರುಳಿಸಿದೆ. ಘಟನೆ ಯಲ್ಲಿ 15 ಮಂದಿ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದರು.
36 ವರ್ಷದ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಅಂಪಾಯರ್. ಆರು ಏಕದಿನ ಮತ್ತು ಆರು ಟಿ20 ಪಂದ್ಯಗಳಿಗೆ ಅಂಪಾಯರಿಂಗ್ ಮಾಡಿದ್ದಾರೆ.