Tuesday, 10th December 2024

ಕ್ವಾಲಿಫೈಯರ್‌ ಪಂದ್ಯದಲ್ಲಿ ‘ಗುರು-ಶಿಷ್ಯ’ರ ಕಾದಾಟ

ದುಬೈ: ಐಪಿಎಲ್ ಟೂರ್ನಿಯಲ್ಲಿ ಮೂರನೇ ಬಾರಿ ‍’ಗುರು-ಶಿಷ್ಯ’ರು ಮುಖಾಮುಖಿಯಾಗಲಿದ್ದಾರೆ.

ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಭಾನುವಾರ ನಡೆಯಲಿರುವ ಕ್ವಾಲಿಫೈಯರ್‌ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ.

ಲೀಗ್ ಹಂತದಲ್ಲಿ ಎರಡೂ ಬಾರಿ ರಿಷಭ್ ತಮ್ಮ ‘ಗುರು’ವಿನ ಬಳಗಕ್ಕೆ ಸೋಲಿನ ರುಚಿ ತೋರಿಸಿದ್ದಾರೆ. ಅಂಕಪಟ್ಟಿ ಯಲ್ಲಿ ಮೊದಲ ಸ್ಥಾನ ಪಡೆದು ಈ ಬಾರಿ ಟ್ರೋಫಿ ಜಯಿಸುವ ಛಲದಲ್ಲಿದೆ.

ತಂಡದ ಯುವ ಮತ್ತು ಅನುಭವಿಗಳು ಉತ್ತಮ ಫಾರ್ಮ್‌ನಲ್ಲಿ ರುವುದು ನಾಯಕನ ಆತ್ಮವಿಶ್ವಾಸ ಹೆಚ್ಚಿಸಿದೆ. ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್, ಫಫ್ ಡುಪ್ಲೆಸಿ, ಅಂಬಟಿ ರಾಯುಡು ಬ್ಯಾಟಿಂಗ್ ಶಕ್ತಿಯಾ ಗಿದ್ದಾರೆ. ಮೋಯಿನ್ ಅಲಿ, ರವೀಂದ್ರ ಜಡೇಜ ಮತ್ತು ಶಾರ್ದೂಲ್ ಠಾಕೂರ್ ಆಲ್‌ರೌಂಡ್ ಆಟವೂ ತಂಡದ ಯಶಸ್ಸಿನಲ್ಲಿ ಪ್ರಮುಖ ವಾಗಿದೆ. ಆದರೆ ಲೀಗ್ ಹಂತದ ಕೊನೆಯ ಮೂರು ಪಂದ್ಯಗಳಲ್ಲಿ ಧೋನಿ ಬಳಗವು ಸೋತಿತ್ತು.

ಚೆನ್ನೈ ತಂಡವು ಕನ್ನಡಿಗ ರಾಬಿನ್ ಉತ್ತಪ್ಪ ಅವರಿಗೆ ಅವಕಾಶ ನೀಡಿತ್ತು. ಈ ಪಂದ್ಯದಲ್ಲಿ ಅವರಿಗೆ ಮತ್ತೊಂದು ಸಲ ತಮ್ಮ ಪ್ರತಿಭೆ ಸಾಬೀತು ಮಾಡುವ ಅವಕಾಶ ಸಿಗುವುದೇ ಎಂಬುದನ್ನು ಕಾದು ನೋಡಬೇಕು.

ಡೆಲ್ಲಿ ತಂಡವೂ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿತ್ತು. ಬೆಂಗಳೂರು ತಂಡವು ಶ್ರೀಕರ್ ಭರತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅರ್ಧಶತಕಗಳ ಬಲದಿಂದ ರೋಚಕ ಜಯ ಸಾಧಿಸಿತ್ತು. ಡೆಲ್ಲಿ ತಂಡದ ಬೌಲರ್‌ ಗಳು ಕೊನೆಯ ಹಂತದ ಓವರ್‌ಗಳಲ್ಲಿ ಮುಗ್ಗರಿಸಿದ್ದರು. ಅದರಲ್ಲೂ ಕೊನೆಯ ಓವರ್‌ನಲ್ಲಿ ಜಯ ಕೈತಪ್ಪಿತ್ತು.

ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಕೂಡ ಉತ್ತಮವಾಗಿ ಆಡುತ್ತಿದ್ಧರೆ, ಆರ್.ಅಶ್ವಿನ್ ಆಲ್‌ರೌಂಡ್ ಆಟ ಮತ್ತು ಆವೇಶ್ ಖಾನ್ ಬೌಲಿಂಗ್‌ನಲ್ಲಿ ಯಶಸ್ಸಿನ ಓಟ ಮುಂದುವರಿಸಿದರೆ ರಿಷಭ್ ಬಳಗಕ್ಕೆ ಫೈನಲ್‌ಗೆ ರಹದಾರಿ ಖಚಿತ.