Monday, 16th September 2024

ಧೋನಿ ಪಡೆಗೆ ಕೆಕೆಆರ್‌ ಸವಾಲು

ಅಬುದಾಬಿ: ಅಬುಧಾಬಿಯಲ್ಲಿ ಬುಧವಾರ ನಡೆಯುವ ಐಪಿಎಲ್ ನ 21ನೇ ಪಂದ್ಯದಲ್ಲಿ ಎಂ.ಎಸ್. ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ.

ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ ತಂಡ 2 ಪಂದ್ಯದಲ್ಲಿ ಜಯ ಕಂಡು 2 ಪಂದ್ಯದಲ್ಲಿ ಸೋತು 4 ಪಾಯಿಂಟ್ ಪಡೆಯುವ ಮೂಲಕ(-0.121) ನೆಟ್ ರನ್ ರೇಟ್’ನಿಂದ ಅಂಕಪಟ್ಟಿಯಲ್ಲಿ 4 ನೇ ಸ್ಥಾನ ದಲ್ಲಿದೆ. ಎಂ.ಎಸ್. ಧೋನಿ ನಾಯಕತ್ವದ ಚೆನ್ನೈ ಸೂಪರ್‌ಕಿಂಗ್ಸ್ ತಂಡ 5 ಪಂದ್ಯಗಳಲ್ಲಿ 2 ಪಂದ್ಯ ದಲ್ಲಿ ಗೆದ್ದು 3 ಪಂದ್ಯದಲ್ಲಿ ಸೋಲು ಕಂಡಿದೆ. (-0.342) ರನ್ ರೇಟ್ ಮೂಲಕ 5ನೇ ಸ್ಥಾನದಲ್ಲಿದೆ.

Leave a Reply

Your email address will not be published. Required fields are marked *