Saturday, 14th December 2024

ಚೆನ್ನೈಗೆ ಗೆಲುವಿನ ತವಕ, ಪಂಜಾಬಿಗೆ ರನ್’ರೇಟ್ ಮುಖ್ಯ

ಅಬುಧಾಬಿ : ಚೆನ್ನೈ ಹಾಗೂ ಪಂಜಾಬ್ ಭಾನುವಾರ ಮುಖಾಮುಖಿಯಾಗಲಿವೆ. ಟಾಸ್ ಗೆದ್ದ ಧೋನಿ ಪಡೆ ಬೌಲಿಂಗ್ ಆಯ್ದುಕೊಂಡಿದೆ.

ಪಂಜಾಬ್ ತಂಡಕ್ಕೆ ಉತ್ತಮ ರನ್ ರೇಟ್ ಯೊಂದಿಗೆ ಗೆದ್ದರೆ ಮುಂದಿನ ಸುತ್ತಿನ ಲೆಕ್ಕಚಾರ ಹಾಕಬಹುದು. 6 ಪಂದ್ಯದಲ್ಲಿ ಗೆಲುವು ಸಾಧಿಸಿದ್ದು 7 ರಲ್ಲಿ ಮುಗ್ಗರಿಸಿ 12 ಅಂಕದೊಂದಿಗೆ ಅಂಕ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ.

ಕ್ಯಾಪ್ಟನ್ ಕೂಲ್ ಧೋನಿಯ ಚೆನ್ನೈ ತಂಡಕ್ಕೆ ಈ ಬಾರಿಯ ಕೂಟದಲ್ಲಿ ಕಹಿ ಅನುಭವ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಪಂಜಾಬ್ ಆಘಾತವಿತ್ತು ಚೆನ್ನೈ ಗೆದ್ದರೆ, ಗೆಲುವಿನೊಂದಿಗೆ ಕೂಟ ಮುಗಿಸಬೇಕಿದೆ.