ಪಂದ್ಯಶ್ರೇಷ್ಠ: ಮಾರ್ಕಸ್ ಸ್ಟೋಯಿನಿಸ್
ಮೊದಲ ಬಾರಿ ಫೈನಲ್ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್ (2020)
2008 – ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್
2009 – ಡೆಕ್ಕನ್ ಚಾರ್ಜಸ್, ರಾಯಲ್ಸ್ ಚಾಲೆಂಜರ‍್ಸ್ ಬೆಂಗಳೂರು
2010 – ಮುಂಬೈ ಇಂಡಿಯನ್ಸ್
2012- ಕೋಲ್ಕತಾ ನೈಟ್ ರೈಡರ‍್ಸ್
2014-ಕಿಂಗ್ಸ್ ಎಲೆವೆನ್ ಪಂಜಾಬ್
ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಸವಾಲಿಗೆ ಸೂಕ್ತ ಜವಾಬು ನೀಡಲು ವಿಫಲವಾದ ಸನ್‌ರೈಸರ‍್ಸ್ ಹೈದರಾಬಾದ್, ಫೈನಲ್ ತಲುಪುವ ಪ್ರಯತ್ನದಲ್ಲಿ ಎಡವಿ, ೧೭ ರನ್ನುಗಳಿಂದ ಸೋಲೋಪ್ಪಿಕೊಂಡಿತು. ತಂಡದ ಏಕೈಕ ಅರ್ಧಶತಕ ದಾಖಲಿಸಿದ ಕೇನ್ ವಿಲಿಯಮ್ಸನ್ ಅವರಿಗೆ ಇತರ ಆಟಗಾರರು ಸೂಕ್ತ ಸಾಥ್ ನೀಡಲಿಲ್ಲ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡಕ್ಕೆ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಹಾಗೂ ಅನುಭವಿ ಶಿಖರ್ ಧವನ್ ಉತ್ತಮ ಆರಂಭ ಒದಗಿಸಿದರು. ಇಬ್ಬರೂ ಮೊದಲ ವಿಕೆಟ್ 86 ರನ್ ಪೇರಿಸಿದರು. ಬಳಿಕ, ನಾಯಕ ಶ್ರೇಯಸ್ ಅಯ್ಯರ್ 21 ಮತ್ತು ಹಿಟ್ಟರ್ ಶಿಮ್ರೋನ್ ಹೇಟ್ಮರ್ ಅಜೇಯ 42 ರನ್ ಗಳಿಸಿ, ಸವಾಲಿನ ಮೊತ್ತ ಪೇರಿಸಿದರು. ಈ ಪಂದ್ಯಕ್ಕೆ ಪೃಥ್ವಿ ಶಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಇದಕ್ಕೆ ಉತ್ತರವಾಗಿ, ಸನ್‌ರೈಸರ‍್ಸ್ ಆರಂಭ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಕೇನ್ ವಿಲಿಯಮ್ಸನ್ ಅವರ ಅರ್ಧಶತಕ ಹೊರತುಪಡಿಸಿದರೆ, ಅಬ್ದುಲ್ ಸಮದ್ ಅವರ 33 ರನ್ ಮಾತ್ರ ತಂಡದ ಸರ್ವಾಧಿಕ ಸ್ಕೋರ್. ವನ್‌ಡೌನ್ ಮನೀಶ್ ಪಾಂಡೆ 21 ಕ್ಕೆ ಆಟ ಮುಗಿಸಿದರು.
ಉಳಿದ ಆಟಗಾರರು ದೀರ್ಘ ಇನ್ನಿಂಗ್ಸ್ ಬೆಳೆಸಲು ಡೆಲ್ಲಿ ಬೌಲರುಗಳು ಆಸ್ಪದ ನೀಡಲಿಲ್ಲ. ವೇಗಿ ಕಗಿಸೋ ರಬಾಡ ಮತ್ತು ಸ್ಟೋಯಿನಿಸ್ ಕ್ರಮವಾಗಿ ನಾಲ್ಕು ಹಾಗೂ ಮೂರು ವಿಕೆಟ್ ಕಿತ್ತು, ಚೇಸಿಂಗಿಗೆ ಬಲವಾದ ಹೊಡೆತ ನೀಡಿದರು.