Friday, 20th September 2024

ಶ್ರೀಕಾಂತ್, ಸಮೀರ್‌ಗೆ ಸೋಲು

ಗ್ವಾಾಂಗ್ಜು:
ಭಾರತದ ಅಗ್ರ ಶ್ರೇಯಾಂಕಿತ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಅವರು ಪ್ರತ್ಯೇಕ ಪಂದ್ಯಗಳಲ್ಲಿ ಸೋತು ಕೊರಿಯಾ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯಿಂದ ನಿರ್ಗಮಿಸಿದ್ದಾಾರೆ.
ಗುರುವಾರ ಕೇವಲ 37 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್‌ಸ್‌ ಪಂದ್ಯದಲ್ಲಿ ಭಾರತದ ಭರವಸೆಯ ಕಿಡಂಬಿ ಶ್ರೀಕಾಂತ್ ಅವರು ಜಪಾನ್‌ನ ಕಂಟಾ ಟಿಸುನೆಯಾಮ ವಿರುದ್ಧ 21-14, 21-19 ಅಂತರದಲ್ಲಿ ಸೋತು ತಮ್ಮ ಅಭಿಯಾನ ಮಗಿಸಿದರು.
ಮೊದಲನೇ ಸೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಜಪಾನ್ ಆಟಗಾರ ಆರನೇ ಶ್ರೇಯಾಂಕಿತ ಹೈದರಾಬಾದ್ ಆಟಗಾರ ವಿರುದ್ಧ ಸುಲಭವಾಗಿ ಜಯ ಸಾಧಿಸಿದರು. ಆದರೆ, ಎರೆಡನೇ ಸೆಟ್‌ನಲ್ಲಿ ಎಚ್ಚೆೆತ್ತುಕೊಂಡ ಕಿಡಂಬಿ, ಭಾರಿ ಪೈಪೋಟಿ ನೀಡಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೇವಲ ಎರಡು ಅಂಕಗಳ ಅಂತದಲ್ಲಿ ದ್ವಿಿತೀಯ ಸೆಟ್ ಅನ್ನು ಬಿಟ್ಟುಕೊಟ್ಟರು.
ಪುರುಷರ ಎರಡನೇ ಸುತ್ತಿಿನ ಮತ್ತೊೊಂದು ಪಂದ್ಯದಲ್ಲಿ ಭಾರತದ ಮತೋರ್ವ ಆಟಗಾರ ಸಮೀರ್ ವರ್ಮಾ, ದಕ್ಷಿಿಣ ಕೊರಿಯಾದ ಕಿಮ್ ಡೊಂಘುನ್ ವಿರುದ್ಧ 21-19, 21-12 ನೇರ ಸೆಟ್‌ಗಳಲ್ಲಿ ಸೋತು ಕೇವಲ 39 ನಿಮಿಷಗಳ ಅವಧಿಯಲ್ಲಿ ಸೋಲು ಅನುಭವಿಸಿದರು.
==