ನವದೆಹಲಿ: 18ನೇ ಆವೃತ್ತಿಗೆ ಬಲಿಷ್ಠ ತಂಡ ಕಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ಗೆ(Axar Patel) ನಾಯಕತ್ವ ನೀಡುವ ಸಾಧ್ಯತೆ ಅಧಿಕವಾಗಿದೆ. ಇದರ ಸುಳಿವನ್ನು ಕೂಡ ಫ್ರಾಂಚೈಸಿ ಬಿಟ್ಟುಕೊಟ್ಟಿದೆ. ಕನ್ನಡಿಗ ಕೆಎಲ್ ರಾಹುಲ್(KL Rahul) ಮೆಗಾ ಹರಾಜಿನಲ್ಲಿ 14 ಕೋಟಿ ರೂ. ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದಾಗ ರಾಹುಲ್ ನಾಯಕನಾಗುತ್ತಾರೆ ಎಂದು ಹೇಳಲಾಗಿತ್ತು.
ಡೆಲ್ಲಿ ಫ್ರಾಂಚೈಸಿ ಅಕ್ಷರ್ ಪಟೇಲ್ ಅವರ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಅಕ್ಷರ್ ನೇರವಾಗಿ ಹೇಳಿ, ಜೀವನದಲ್ಲಿ ಕೆಲಸಗಳು ಬರುತ್ತಿರುತ್ತದೆ, ಹೋಗುತ್ತಿರುತ್ತದೆ. ಇದನ್ನು ಮಾಡುತ್ತಾ ಮುಂದೆ ಸಾಗುತ್ತಿರಬೇಕು ಎಂದು ಹೇಳುತ್ತಿರುವುದನ್ನು ಕಾಣಬಹುದು. ಇದ್ನು ಗಮನಿಸುವಾಗ ಅಕ್ಷರ್ ನಾಯಕನಾಗುವುದು ಖಚಿತ ಎನ್ನುವಂತಿದೆ.
ಅಕ್ಷರ್ ಪಟೇಲ್ ಅವರನ್ನು 16.50 ಕೋಟಿ ರೂ.ಗೆ ಡೆಲ್ಲಿ ತಂಡ ರಿಟೇನ್ ಮಾಡಿತ್ತು. 2019ರಿಂದ ಡೆಲ್ಲಿ ತಂಡದಲ್ಲೇ ಇರುವ ಅಕ್ಷರ್, ಕಳೆದೆರಡು ಆವೃತ್ತಿಗಳಲ್ಲಿ ತಂಡದ ಉಪನಾಯಕನಾಗಿ ಕೆಲ ಪಂದ್ಯಗಳಲ್ಲಿ ಹಂಗಾಮಿ ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದರು. ಮಾಜಿ ಕ್ರಿಕೆಟಿಗ ಹಾಗೂ ವಿಶ್ಲೇಷಕ ಆಕಾಶ್ ಚೋಪ್ರಾ ಕೂಡ ರಾಹುಲ್ಗಿಂತ ಅಕ್ಷರ್ಗೆ ನಾಯಕತ್ವ ವಹಿಸುವುದು ಉತ್ತಮ ಆಯ್ಕೆಯಾಗಿರಲಿದೆ ಎಂದಿದ್ದಾರೆ.
ಕೆಲ ಮೂಲಗಳ ಪ್ರಕಾರ ರಾಹುಲ್‌ಗೆ ನಾಯಕತ್ವ ನೀಡಲು ಫ್ರಾಂಚೈಸಿ ಮುಂದಾಗಿದ್ದರೂ ರಾಹುಲ್ ಒತ್ತಡ ರಹಿತವಾಗಿ ಬ್ಯಾಟ್ ಬೀಸುವ ನಿಟ್ಟಿನಲ್ಲಿ ನಾಯಕತ್ವದ ಆಫರ್ ತಿರಸ್ಕರಿಸಿದರು ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಇದನ್ನೂ ಓದಿ Rohit Sharma fan: 10 ವರ್ಷ ಕಾದು ರೋಹಿತ್ ಹಸ್ತಾಕ್ಷರ ಪಡೆದ ಅಭಿಮಾನಿ; ಇಲ್ಲಿದೆ ವಿಡಿಯೊ
ಡೆಲ್ಲಿ ಕ್ಯಾಪಿಟಲ್ಸ್
ಕೆಎಲ್ ರಾಹುಲ್ (14 ಕೋಟಿ), ಮಿಚೆಲ್ ಸ್ಟಾರ್ಕ್ (11.75 ಕೋಟಿ), ಟಿ. ನಟರಾಜನ್ (10.75 ಕೋಟಿ), ಜೇಕ್ ್ರೇಸರ್ ಮೆಕ್ಗುರ್ಕ್ (9 ಕೋಟಿ), ಹ್ಯಾರಿ ಬ್ರೂಕ್ (6.25 ಕೋಟಿ), ಕರುಣ್ ನಾಯರ್ (50 ಲಕ್ಷ), ಸಮೀರ್ ರಿಜ್ವಿ (95 ಲಕ್ಷ), ಆಶುತೋಷ್ ಶರ್ಮ (3.80 ಕೋಟಿ), ಮೋಹಿತ್ ಶರ್ಮ (2.20 ಕೋಟಿ). ಮುಕೇಶ್ ಕುಮಾರ್ (8 ಕೋಟಿ), ಫಾಫ್ ಡು ಪ್ಲೆಸಿಸ್ (2 ಕೋಟಿ), ದರ್ಶನ್ ನಲ್ಕಂಡೆ (30 ಲಕ್ಷ), ವಿಪ್ರಜ್ ನಿಗಮ್ (50 ಲಕ್ಷ), ದುಶ್ಮಂತ ಚಮೀರ (75 ಲಕ್ಷ), ಡೊನೊವನ್ ಫೆರೀರ (75 ಲಕ್ಷ), ಅಜಯ್ ಮಂಡಲ್ (30 ಲಕ್ಷ), ಮನ್ವಂತ್ ಕುಮಾರ್ (30 ಲಕ್ಷ), ತ್ರಿಪುರಣ ವಿಜಯ್ (30 ಲಕ್ಷ), ಮಾಧವ್ ತಿವಾರಿ (40 ಲಕ್ಷ).