ಒಡೆನ್ಸ್: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು(PV Sindhu) ಅವರು ಡೆನ್ಮಾರ್ಕ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್(Denmark Open) ಟೂರ್ನಿಯಲ್ಲಿ ಸೋತು ತನ್ನ ಅಭಿಯಾನ ಮುಗಿಸಿದ್ದಾರೆ. ಶುಕ್ರವಾರ ರಾತ್ರಿ ನಡೆದಿದ್ದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಪಂದ್ಯದಲ್ಲಿ ಇಂಡೊನೇಷ್ಯಾದ ಗ್ರೆಗೋರಿಯಾ ತುಂಜುಂಗ್ ಎದುರು ಸೋಲನುಭವಿಸಿದರು. ಸಿಂಧು ಸೋಲಿನಿಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಕೂಡ ಅಂತ್ಯಗೊಂಡಿತು.
ಸುಮಾರು ಒಂದು ಗಂಟೆ ನಡೆದ ಈ ಪಂದ್ಯದಲ್ಲಿ ಸಿಂಧು 13-21, 21-16, 9-21ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಗ್ರೆಗೋರಿಯಾ ಎದುರು ಸೋಲನುಭವಿಸಿದರು. ಈ ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಗ್ರೆಗೋರಿಯಾ ತುಂಜುಂಗ್ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಆಯನ್ ಸೆ ಯಂಗ್ ಎದುರು ಆಡಲಿದ್ದಾರೆ.
ವಿಶ್ವದ ನಂ.8ನೇ ಆಟಗಾರ್ತಿ ಮರಿಸ್ಕಾ ಹಿಂದಿನ 12 ಪಂದ್ಯಗಳಲ್ಲಿ ಸಿಂಧು ಅವರನ್ನು ಕೇವಲ ಎರಡು ಬಾರಿ ಸೋಲಿಸಿದ್ದಾರೆ. ಚೀನಾದ ಹಾನ್ ಯುಇ ಅವರನ್ನು 18-21, 21-12, 21-16 ಗೇಮ್‌ಗಳ ಅಂತರದಿಂದ ಮಣಿಸುವ ಮೂಲಕ ಸಿಂಧು ಕ್ವಾರ್ಟರ್ ಫೈನಲ್ ತಲುಪಿದ್ದರು. ಒಲಿಂಪಿಕ್ಸ್‌ನಲ್ಲಿ ಅಂತಿಮ 16ರ ಸುತ್ತಿನಲ್ಲಿ ಚೀನಾದ ಹೀ ಬಿಂಗ್ ಜಿಯಾವೊ ಎದುರು ಸೋತ ನಂತರ ಸಿಂಧು ಆಡಿರುವ 2ನೇ ಪಂದ್ಯಾವಳಿ ಇದಾಗಿತ್ತು.
ಇದನ್ನೂ ಓದಿ IND vs NZ: ಫಿಟ್ ಆದ ಪಂತ್; ಬ್ಯಾಟಿಂಗ್ ಓಕೆ, ಕೀಪಿಂಗ್ ಡೌಟ್
ಮೊದಲ ಗೇಮ್ ನೀರಸ ಪ್ರದರ್ಶನ ತೋರುವ ಮೂಲಕ ಸೋಲು ಕಂಡಿದ್ದ ಸಿಂಧು ದ್ವಿತೀಯ ಗೇಮ್‌ನಲ್ಲಿ ಬಲಿಷ್ಠ ಹೊಡೆತಗಳ ಮೂಲಕ ಗೆಲುವು ಸಾಧಿಸಿ 1-1 ಸಮಬಲ ಸಾಧಿಸಿದರು. ಅಂತಿಮ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಅತ್ಯಂತ ಕಳಪೆ ಆಟವಾಡುವ ಮೂಲಕ ಸೋಲಿಗೆ ತುತ್ತಾದರು. ಗಳಿಸಿದ್ದು ಕೇವಲ 9 ಅಂಕ ಮಾತ್ರ.
9000 ರನ್ ಕ್ಲಬ್‌ಗೆ ಸೇರಿದ ವಿರಾಟ್ ಕೊಹ್ಲಿ
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 53 ರನ್ ಬಾರಿಸುತ್ತಿದ್ದಂತೆಯೇ 9000 ಟೆಸ್ಟ್ ರನ್ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟರ್ ಎನ್ನುವ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿಗೂ ಮೊದಲು ಸಚಿನ್ ತೆಂಡುಲ್ಕರ್(15,921), ರಾಹುಲ್ ದ್ರಾವಿಡ್(13,265) ಹಾಗೂ ಸುನಿಲ್ ಗವಾಸ್ಕರ್(10,122) ಈ ಸಾಧನೆ ಮಾಡಿದ್ದಾರೆ.