Wednesday, 8th January 2025

BCCI Secretary: ಕಾರ್ಯದರ್ಶಿಯಾಗಿ ಸೈಕಾ, ಖಜಾಂಚಿಯಾಗಿ ಭಾಟಿಯಾ ಅವಿರೋಧ ಆಯ್ಕೆ

ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿಯಾಗಿ(BCCI secretary) ದೇವಜಿತ್ ಸೈಕಾ(Devajit Saikia) ಮತ್ತು ಖಜಾಂಚಿಯಾಗಿ ಪ್ರಭತೇಜ್ ಸಿಂಗ್ ಭಾಟಿಯಾ(Prabhtej Singh Bhatia) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜನವರಿ 12 ರಂದು ಬಿಸಿಸಿಐನ ಎಸ್‌ಜಿಎಂ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆ. ಔಪಚಾರಿಕವಾಗಿರುವ ಫಲಿತಾಂಶಗಳನ್ನು ಅದೇ ದಿನ ಪ್ರಕಟಿಸಲಾಗುವುದು.

ಡಿಸೆಂಬರ್ 1 ರಂದು ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ವಹಿಸಿಕೊಂಡ ನಂತರ ಬಿಸಿಸಿಐ ಕಾರ್ಯದರ್ಶಿ ಹುದ್ದೆ ಖಾಲಿಯಾಗಿತ್ತು. ಸೈಕಾ ಅವರನ್ನು ಹಂಗಾಮಿ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಖಜಾಂಚಿಯಾಗಿದ್ದ ಆಶಿಷ್‌ ಶೆಲಾರ್‌ ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷರಾಗಿದ್ದು, ನೂತನ ಸರಕಾರದಲ್ಲಿ ಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಹೀಗಾಗಿ ಈ ಎರಡು ಸ್ಥಾನಗಳು ಖಾಲಿಯಾಗಿತ್ತು.

ಇದನ್ನೂ ಓದಿ BCCI Secretary: ಬಿಸಿಸಿಐ ಕಾಯದರ್ಶಿ ಹುದ್ದೆಗೆ ಸೈಕಿಯಾ ಅರ್ಜಿ

ನಾಮಪತ್ರ ಸಲ್ಲಿಸುವ ಗಡುವು ಕಳೆದ ವಾರ ಕೊನೆಗೊಂಡಿದ್ದು, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಾಮಪತ್ರ ಹಿಂಪಡೆಯುವಿಕೆ ಕೊನೆಗೊಂಡಿತ್ತು. ನಾಮನಿರ್ದೇಶನಗಳ ಅಂತಿಮ ಪಟ್ಟಿಯನ್ನು ಬಿಸಿಸಿಐ ಚುನಾವಣಾ ಅಧಿಕಾರಿ ಮತ್ತು ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಅಚಲ್ ಕುಮಾರ್ ಜೋತಿ ಮಂಗಳವಾರ ಸಿದ್ಧಪಡಿಸಿದ್ದರು.

ಮಂಡಳಿಯ ಅಧ್ಯಕ್ಷ ರೋಜರ್ ಬಿನ್ನಿ ಅವರ ಸಾಂವಿಧಾನಿಕ ಅಧಿಕಾರವನ್ನು ಬಳಸಿದ ನಂತರ ಸೈಕಾ ಅವರನ್ನು ಈ ಹಿಂದೆ ಹಂಗಾಮಿ ಕಾರ್ಯದರ್ಶಿಯಾಗಿ ನೇಮಿಸಲಾಯಿತು. 56 ವರ್ಷದ ಸೈಕಿಯಾ, ಪ್ರಥಮ ದರ್ಜೆಯಲ್ಲಿ ಅಸ್ಸಾಂ ಪರ 4 ಪಂದ್ಯ ಆಡಿದ್ದಾರೆ. ಸೈಕಾ ಅವರಿಗೆ ಕಾರ್ಯದರ್ಶಿ ಅಧಿಕಾರವನ್ನು ಹಸ್ತಾಂತರಿಸಲು ಬಿಸಿಸಿಐ ಸಂವಿಧಾನದ ಷರತ್ತು 7(1) (ಡಿ) ಅನ್ನು ಬಿನ್ನಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *