Monday, 6th January 2025

ಚಹಲ್-ಧನಶ್ರೀ ವಿಚ್ಛೇದನ ಖಚಿತ?; ಇನ್‌ಸ್ಟಾದಲ್ಲಿ ಅನ್‌ಫಾಲೋ, ಫೋಟೊ ಡಿಲೀಟ್‌

ಮುಂಬಯಿ: ಭಾರತ ತಂಡದ ಲೆಗ್​ ಸ್ಪಿನ್ನರ್ ಯಜುವೇಂದ್ರ ಚಾಹಲ್(Yuzvendra Chahal) ಹಾಗೂ ಧನಶ್ರಿ ವರ್ಮಾ(Dhanashree Verma) ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವುದು ಬಹುತೇಕ ಖಚಿತವಾದಂತಿದೆ. ಕಳೆದೊಂದು ವರ್ಷದಿಂದ ಕೇಳಿ ಬರುತ್ತಿರುವ ಈ ಜೋಡಿದ ವಿಚ್ಛೇದನದ ಊಹಾಪೋಹಗಳು ಶೀಘ್ರದಲ್ಲೇ ನಿಜವಾಗುವಂತಿದೆ. ಹೌದು ಇಬ್ಬರು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಚಹಲ್‌ ಪತ್ನಿ ಜತೆಗಿದ್ದ ಎಲ್ಲ ಫೋಟೊಗಳನ್ನು ಕೂಡ ಡಿಲೀಟ್‌ ಮಾಡಿದ್ದಾರೆ. ಹೀಗಾಗಿ ಇವರಿಬ್ಬರು ವಿಚ್ಛೇದನ ಪಡೆಯುವುದು ಖಚಿತ ಎನ್ನಲಾಗಿದೆ.

ಕಳೆದೊಂದು ವರ್ಷದಿಂದ ಚಹಲ್ ಹಾಗೂ ಧನ ಶ್ರೀ(Dhanashree Verma) ಮಧ್ಯೆ ಮಧ್ಯೆ ಎಲ್ಲವೂ ಸರಿಯಿಲ್ಲ. ಈ ಜೋಡಿ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂಬುದಾಗಿ ಸುದ್ದಿ ಹಡುತ್ತಲೇ ಇತ್ತು. ಧನಶ್ರಿ ತಮ್ಮ ಗೆಳೆಯರೊಂದಿಗೆ ಕಾಣಿಸಿಕೊಂಡಾಗಲೆಲ್ಲವೂ ಸಾಮಾಜಿ ಜಾಲತಾಣದಲ್ಲಿ ಈ ವಿಚಾರ ಆಗಾಗ ಮುನ್ನಲೆಗೆ ಬರುತ್ತಿತ್ತು. 2020ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.

ಧನಶ್ರಿ ವರ್ಮಾ ಅವರು ಚಹಲ್‌ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದರೂ ಚಹಲ್‌ ಜತೆಗಿರುವ ಫೋಟೊವನ್ನು ಡಿಲೀಟ್‌ ಮಾಡಿಲ್ಲ. ಆದರೆ ಚಹಲ್‌, ಧನಶ್ರಿ ಜತೆಗಿರುವ ಎಲ್ಲ ಫೋಟೋ ಮತ್ತು ವಿಡಿಯೊಗಳನ್ನು ಡಿಲೀಟ್‌ ಮಾಡಿದ್ದಾರೆ.

ಕಳೆದ ವರ್ಷ ನಡೆದಿದ್ದ ಐಪಿಎಲ್‌ ಮೆಗಾ ಹರಾಜಿನಲ್ಲಿ ಚಹಲ್‌18 ಕೋಟಿ ರೂ. ಪಡೆದು ಪಂಜಾಬ್‌ ಕಿಂಗ್ಸ್‌ ತಂಡದ ಪಾಲಾಗಿದ್ದರು. ಇದುವರೆಗೆ 160 ಐಪಿಎಲ್‌ ಪಂದ್ಯಗಳನ್ನಾಡಿ 205 ವಿಕೆಟ್‌ ಕಿತ್ತು ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ ಎನಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್‌ ತಂಡದ ಪರ ಆಡಿದ್ದರು. ಇದುವರೆಗೆ ಭಾರತ ಪರ ಚಹಲ್‌ 72 ಏಕದಿನ ಪಂದ್ಯಗಳಿಂದ 121 ವಿಕೆಟ್​, 80 ಟಿ20 ಆಡಿ 96 ವಿಕೆಟ್​ ಕಡೆವಿದ್ದಾರೆ.

ನೃತ್ಯಪಟು ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯನ್ಸರ್ ಆಗಿರುವ ಧನಶ್ರೀ ವರ್ಮಾ ನಿರ್ಮಾಣ ಹಂತದಲ್ಲಿರುವ ‘ಆಕಾಶಂ ದಾಟಿ ವಸ್ತಾವಾ’ ಎಂಬ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಶಿ ಕುಮಾರ್ ಮುತ್ತಲೂರಿ ಎನ್ನುವರು ನಿರ್ದೇಶಿಸುತ್ತಿರುವ ರೊಮ್ಯಾಂಟಿಂಕ್ ಮ್ಯುಸಿಕಲ್ ಡ್ರಾಮಾ ಕಥಾ ಹಂದರವನ್ನು ಹೊಂದಿರುವ ಚಿತ್ರ ಇದಾಗಿದೆ. ದಿಲ್ ರಾಜು ಅವರ ನಿರ್ಮಾಣ ಸಂಸ್ಥೆಯಿಂದ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ಧನಶ್ರೀ ವರ್ಮಾ(Dhanashree Verma) ಕೆಲ ಮಾದಕ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೊ ಎಲ್ಲೆಡೆ ವೈರಲ್‌ ಜತೆಗೆ ಟ್ರೋಲ್‌ ಕೂಡ ಆಗಿತ್ತು.