Friday, 22nd November 2024

ಧೋನಿ ಪಡೆಗೆ ಹ್ಯಾಟ್ರಿಕ್ ಸೋಲು

* ಏಳು ರನ್ ಗೆಲುವು ಸಾಧಿಸಿದ ವಾರ್ನರ್ ಪಡೆ

ದುಬೈ: ಇಲ್ಲಿನ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ಸತತ ಮೂರನೇ ಪಂದ್ಯದಲ್ಲೂ ಸೋಲು ಕಂಡಿದೆ. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಏಳು ರನ್ನುಗಳಿಂದ ಪಂದ್ಯ ಗೆದ್ದುಕೊಂಡಿದೆ.

ಸನ್‌ರೈಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಖಾತೆ ತೆರೆಯದೆ ಜಾನಿ ಬೇರ್‌ಸ್ಟೋ ವಿಕೆಟ್ ಒಪ್ಪಿಸಿದರು. ಬಳಿಕ ನಾಯಕ ಡೇವಿಡ್ ವಾರ್ನರ್ ಮತ್ತು ಕನ್ನಡಿಗ ಮನೀಶ್ ಪಾಂಡೆ ಇನ್ನಿಂಗ್ಸ್ ಬೆಳೆಸುವ ಕಾಯಕಕ್ಕೆ ಇಳಿದರು. ಇಬ್ಬರು ವೈಯಕ್ತಿಕ ಮೊತ್ತ  30 ದಾಟುವ ಮುನ್ನವೇ ಪೆವಿಲಿಯನ್ ಸೇರಿದರು. ಆ ಬಳಿಕ ಪ್ರಿಯಮ್ ಗರ್ಗ್ ಅರ್ಧಶತಕ ಬಾರಿಸಿದರೆ, ಅಭಿಷೇಕ್ ಶರ್ಮಾ ತಮ್ಮ ಅಮೂಲ್ಯ ಕೊಡುಗೆ ನೀಡಿದರು. ಸನ್‌ರೈಸರ್ಸ್ ಇನ್ನಿಂಗ್ಸ್’ನಲ್ಲಿ ಎರಡೇ ಸಿಕ್ಸರ್ ಸಿಡಿದದ್ದು, ಚೆನ್ನೆöÊ ಕರಾರುವಾಕ್ ಬೌಲಿಂಗಿಗೆ ಸಾಕ್ಷಿಯಾಗಿತ್ತು.

ಉತ್ತರವಾಗಿ ಚೆನ್ನೆöÊ ಸೂಪರ್ ಕಿಂಗ್ಸ್ ಆಲ್ರೌಂಡರ್ ಶೇನ್ ವಾಟ್ಸನ್ ಮೊದಲ ಓವರಿನಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ಮಹೇಂದ್ರ ಸಿಂಗ್ ಧೋನಿ (47) ಅಜೇಯ ಹಾಗೂ ರವೀಂದ್ರ ಜಡೇಜಾ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ಬಳಿ ತಂದು ನಿಲ್ಲಿಸಿದರು. ಆದರೆ, ಕೊನೆಯಲ್ಲಿ ಹೊಡೆಬಡಿಯ ಆಟ ಚೆನ್ನೆöÊಗೆ ಗೆಲುವನ್ನು ತಂದುಕೊಡಲಿಲ್ಲ. ಅಂತಿಮವಾಗಿ ಚೆನ್ನೆöÊ ಐದು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೋಪ್ಪಿಕೊಂಡಿತು.

ಅಜೇಯ ಧೋನಿ ರನ್ ಚೇಸ್‌ನಲ್ಲಿ ಎಡವಿದ್ದು
2013ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಅಜೇಯ 63
2014ರಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ದ ಅಜೇಯ 42
2018ರಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ದ ಅಜೇಯ 79
2019ರಲ್ಲಿ ರಾಯಲ್ ಚಾಲೆಂರ‍್ಸ್ ಬೆಂಗಳೂರು ವಿರುದ್ದ ಅಜೇಯ 84
2020ರಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ದ ಅಜೇಯ 29
2020ರಲ್ಲಿ ಸನ್‌ರೈಸರ‍್ಸ್ ಹೈದರಾಬಾದ್ ವಿರುದ್ದ ಅಜೇಯ 47.

ಸ್ಕೋರ್ ವಿವರ
ಸನ್‌ರೈಸರ್ಸ್ ಹೈದರಾಬಾದ್ 164-5
ಡೇವಿಡ್ ವಾರ್ನರ್ 28, ಮನೀಶ್ ಪಾಂಡೆ 29, ಅಭಿಷೇಕ್ ಶರ್ಮಾ 31, ಪ್ರಿಯಮ್ ಗರ್ಗ್ 51 ಅಜೇಯ.
ಬೌಲಿಂಗ್: ದೀಪಕ್ ಚಹರ್ 31-2, ಶಾರ್ದೂಲ್ ಠಾಕೂರ್ 32-1, ಪಿಯೂಷ್ ಚಾವ್ಲಾ 20-1.

ಚೆನ್ನೆöÊ ಸೂಪರ್ ಕಿಂಗ್ಸ್ 157-5
ರವೀಂದ್ರ ಜಡೇಜಾ 50, ಫಾಫ್ ಡು ಪ್ಲೆಸಿಸ್ 22, ಮಹೇಂದ್ರ ಸಿಂಗ್ ಧೋನಿ 47 ಅಜೇಯ.
ಬೌಲಿಂಗ್: ಟಿ.ನಟರಾಜನ್ 43-2, ಭುವನೇಶ್ವರ್ ಕುಮಾರ್ 20-1, ಅಬ್ದುಲ್ ಸಮದ್ 41-1.
ಪಂದ್ಯಶ್ರೇಷ್ಠ: ಪ್ರಿಯಮ್ ಗರ್ಗ್