ಅಬುಧಾಬಿ: ರಾಜಸ್ಥಾನ ತಂಡವನ್ನು 57 ರನ್‌ಗಳಿಂದ ಸೋಲಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಹ್ಯಾಟ್ರಿಕ್ ಗೆಲುವಿನ ಕನಸು ನನಸಾಗಿದೆ.
ಟಾಸ್ ಗೆದ್ದ ಮುಂಬೈಗೆ ಸಾಧಾರಣ ಆರಂಭ ಸಿಕ್ಕಿತು. ನಾಯಕ ರೋಹಿತ್ ಶರ್ಮಾ(35) ಕೀಪರ್ ಡಿ’ಕಾಕ್ (23) ಮೊದಲ ವಿಕೆಟಿಗೆ 49 ರನ್ ಗಳಿಸಿ, ಬೇರ್ಪಟ್ಟರು. ಬಳಿಕ ಇನ್ನಿಂಗ್ಸ್ ಹಾಗೂ ಸವಾಲು ಎಸೆಯುವ ಮೊತ್ತ ಪೇರಿಸುವ ಹೊಣೆ ವನ್‌ಡೌನ್ ಆಟಗಾರ ಸೂರ್ಯಕುಮಾರ್ ಯಾದವ್ ಅವರ ಹೆಗಲಿಗೇರಿತು. ಅದರಲ್ಲಿ ಅವರು ಯಶಸ್ವಿಯಾದರು.
11 ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದಂತೆ, ಅರ್ಧಶತಕ (79) ಬಾರಿಸಿ, ಅಜೇಯರಾಗುಳಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ೩೦ ರನ್ ಗಳಿಸಿ, ತಂಡದ ಮೊತ್ತವನ್ನು ಇನ್ನೂರರ ಗಡಿ ತಂದು ನಿಲ್ಲಿಸದರು. ಬೌಲಿಂಗಿನಲ್ಲಿ ಶ್ರೇಯಸ್ ಗೋಪಾಲ್ ಎರಡು ವಿಕೆಟ್ ಕಿತ್ತು ಮಿಂಚಿದರು.
ಉತ್ತರವಾಗಿ, ರಾಜಸ್ಥಾನದ ಆರಂಭ ಆಘಾತಕಾರಿಯಾಗಿತ್ತು. ತಂಡದ ಮೊತ್ತ 12 ತಲುಪು ವಷ್ಟರಲ್ಲಿ ಅಗ್ರ ಮೂವರು ಇನ್‌ಫಾರ್ಮ್ ಬ್ಯಾಟ್ಸ್ಮನ್‌ಗಳು ಪೆವಿಲಿಯನ್ ಸೇರಿಕೊಂಡಾ ಗಿತ್ತು. ವಿಕೆಟ್ ಕೀಪರ್ ಜೋಸ್ ಬಟ್ಲರ್ ಅರ್ಧಶತಕ ಬಾರಿಸಿದರೂ, ವ್ಯರ್ಥವಾಯಿತು. ಬಳಿಕ ವೇಗಿ ಜೋಫ್ರಾ ಆರ್ಚರ್ ಅವರದ್ದೇ ಸವಾರ್ಧಿಕ ಗಳಿಕೆ (24). ಆರು ಮಂದಿ ಸಿಂಗಲ್ ಡಿಜಿಟ್‌ಗೆ ಸಾಕಾದರು.
ಬುಮ್ರಾ ನಾಲ್ಕು ವಿಕೆಟ್ ಕಿತ್ತರೆ, ಬೌಲ್ಡ್ ಹಾಗೂ ಪ್ಯಾಟಿನ್ಸನ್ ತಲಾ ಎರಡು ವಿಕೆಟ್ ಕಿತ್ತಿದ್ದು, ರಾಜಸ್ಥಾನಕ್ಕೆ ರನ್ ಹರಿಸಲು ಆಸ್ಪದ ನೀಡಲಿಲ್ಲ. ಅಂತಿಮವಾಗಿ, 136 ರನ್ನಿಗೆ ತನ್ನ ಹೋರಾಟ ಮುಗಿಸಿತು. ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.