ನವದೆಹಲಿ : ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಮುಖ್ಯ ಕೋಚ್ ಸ್ಥಾನಕ್ಕೆ ಔಪಚಾರಿಕವಾಗಿ ಅರ್ಜಿ ಸಲ್ಲಿಸಿ ದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದೆ.
ಭಾರತದ ಮಾಜಿ ದಂತಕಥೆ ವಿವಿಎಸ್ ಲಕ್ಷ್ಮಣ್, ದ್ರಾವಿಡ್ ಅವರಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತದ ಮುಂದಿನ ತರಬೇತುದಾರನಾಗಲು ದ್ರಾವಿಡ್ʼಗೆ ಬಿಸಿಸಿಐ ಆದ್ಯತೆ ನೀಡಿತ್ತು. ಆದರೆ ಮಾಜಿ ನಾಯಕ ಆಸಕ್ತಿ ತೋರಿಸಿರ ಲಿಲ್ಲ. ಆದಾಗ್ಯೂ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಫೈನಲ್ ಸಂದರ್ಭದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೇ ಶಾ ಅವರನ್ನು ಭೇಟಿಯಾಗಿದರು.
ಐಸಿಸಿ ಟಿ20 ವಿಶ್ವಕಪ್ 2021ರ ನಂತರ ರವಿಶಾಸ್ತ್ರಿ ಕೆಳಗಿಳಿದ ನಂತರ ಈ ಕೆಲಸವನ್ನು ತೆಗೆದು ಕೊಳ್ಳುವಂತೆ ಒತ್ತಾಯಿಸಲಾಗಿತ್ತು.