ಕ್ರೈಸ್ಟ್‌ಚರ್ಚ್: ಭಾನುವಾರ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ (END vs NZ) ಇಂಗ್ಲೆಂಡ್ ಗೆಲುವು ದಾಖಲಿಸುವ ಮೂಲಕ ಇತಿಹಾಸ ಬರೆದಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನೀಡಿದ್ದ 104 ರನ್‌ಗಳ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ತನ್ನ ʻಬ್ಯಾಝ್ ಬಾಲ್ʼ ಶೈಲಿಯಲ್ಲಿ ದಾಖಲೆಯ 12.4 ಓವರ್‌ಗಳಲ್ಲಿ 8 ವಿಕೆಟ್ ಜಯ ಸಾಧಿಸಿತು. ಪ್ರವಾಸಿ ತಂಡವು ಇತಿಹಾಸದಲ್ಲಿ 100 ಕ್ಕೂ ಹೆಚ್ಚು ರನ್‌ಗಳನ್ನು ಬೆನ್ನಟ್ಟಲು ಕನಿಷ್ಠ ಸಂಖ್ಯೆಯ ಓವರ್‌ಗಳನ್ನು ಬಳಸಿದೆ. ಹಿಂದೆ ಈ ದಾಖಲೆ ಸೋತಿರುವ ನ್ಯೂಜಿಲೆಂಡ್ ಹೆಸರಿನಲ್ಲಿತ್ತು. 2017ರಲ್ಲಿ ಇದೇ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ 18.4 ಓವರ್‌ಗಳಲ್ಲಿ 109 ರನ್‌ಗಳ ಗುರಿಯನ್ನು ಚೇಸ್ ಮಾಡಿತ್ತು.
104 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೇವಲ ಒಂದು ರನ್‌ಗೆ ಜ್ಯಾಕ್ ಕ್ರಾವ್ಲೀ ಅವರ ವಿಕೆಟ್ ಅನ್ನು ಕಳೆದುಕೊಂಡಿತು. ಇದರ ನಂತರ ಬೆನ್ ಡಕೆಟ್ (18 ಎಸೆತಗಳಲ್ಲಿ 27 ರನ್), ಡೆಬ್ಯೂಟಂಟ್ ಜಾಕೋಬ್ ಬೆಥೆಲ್ (37 ಎಸೆತಗಳಲ್ಲಿ 50* ರನ್) ಮತ್ತು ಜೋ ರೂಟ್ (15 ಎಸೆತಗಳಲ್ಲಿ 23* ರನ್) ಕೇವಲ 12.4 ಓವರ್‌ಗಳಲ್ಲಿ ತಮ್ಮ ತಂಡವನ್ನು ಗೆಲ್ಲಿಸಲು ನೆರವಾದರು. ಇಂಗ್ಲೆಂಡ್ ಹೆಸರಿನಲ್ಲಿ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. 100 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡುವಾಗ ಇಂಗ್ಲೆಂಡ್ 8.21 ರನ್ ರೇಟ್ ದಾಖಲಿಸಿತು. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ ಹೆಸರಿನಲ್ಲಿತ್ತು. ವಿಂಡೀಸ್ 1983 ರಲ್ಲಿ ಕಿಂಗ್‌ಸ್ಟನ್‌ನಲ್ಲಿ ಭಾರತದ ವಿರುದ್ಧ 172 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟುವ ಸಂದರ್ಭದಲ್ಲಿ 6.82 ರನ್ ರೇಟ್ ಸಾಧಿಸಿತ್ತು. ಇದೀಗ ವಿಂಡೀಸ್ ದಾಖಲೆಯನ್ನು ಇಂಗ್ಲೆಂಡ್ ಮುರಿದಿದೆ.
ನ್ಯೂಜಿಲೆಂಡ್‌ನ ಕಳಪೆ ಬ್ಯಾಟಿಂಗ್
147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು 100 ಅಥವಾ ಅದಕ್ಕಿಂತ ಹೆಚ್ಚು ರನ್ ಚೇಸ್ ಮಾಡುವಾಗ 8ಕ್ಕಿಂತ ಹೆಚ್ಚು ರನ್ ರೇಟ್ ಕಾಯ್ದುಕೊಂಡಿದ್ದು ಇದೇ ಮೊದಲು. ಇಂಗ್ಲೆಂಡ್ ಈಗ ಸತತ ಐದು ಟಸ್ಟ್ ಸರಣಿಗಳ ಪೈಕಿ ಮೊದಲ ಟೆಸ್ಟ್ (ಎರಡು ತವರಿನ ಮತ್ತು ಮೂರು ವಿದೇಶ) ಗೆದ್ದಿದೆ. 2023ರ ಆಷಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ತನ್ನ ಮೊದಲನೇ ಪಂದ್ಯದಲ್ಲಿ ಸೋತಿತ್ತು.
England reign supreme in Christchurch ✨
— ICC (@ICC) December 1, 2024
#WTC25 #NZvENG pic.twitter.com/X8XkhGwnBs
ಇನ್ನು ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತ್ತು. ಕೇನ್ ವಿಲಿಯಮ್ಸನ್ (197 ಎಸೆತಗಳಲ್ಲಿ 93 ರನ್) ಮತ್ತು ಗ್ಲೆನ್ ಫಿಲಿಪ್ಸ್ (87 ಎಸೆತಗಳಲ್ಲಿ 58 ರನ್) ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 348 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಬ್ರೈಡನ್ ಕಾರ್ಸ್ (4/64) ಮತ್ತು ಶೋಯೆಬ್ ಬಶೀರ್ (4/69) ಇಂಗ್ಲೆಂಡ್ ಪರ ತಲಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು.
ಇಂಗ್ಲೆಂಡ್‌ಗೆ 8 ವಿಕೆಟ್ ಜಯ
ನಂತರ ಪ್ರಥಮ ಇನಿಂಗ್ಸ್ ಮಾಡಿದ್ದ ಇಂಗ್ಲೆಂಡ್ ತಂಡ, ಹ್ಯಾರಿ ಬ್ರೂಕ್ (197 ಎಸೆತಗಳಲ್ಲಿ 171 ರನ್) ಅವರ ಅದ್ಭುತ ಶತಕ ಮತ್ತು ನಾಯಕ ಬೆನ್ ಸ್ಟೋಕ್ಸ್ (146 ಎಸೆತಗಳಲ್ಲಿ 80 ರನ್) ಅವರ ಅರ್ಧಶತಕಗಳ ನೆರವಿನಿಂದ 499 ರನ್‌ಗಳಿಗೆ ಆಲೌಟ್ ಆಗಿತ್ತು. ನಂತರ ದ್ವಿತೀಯ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡ 254 ರನ್‌ಗಳಿಗೆ ಆಲೌಟ್ ಆಗಿತ್ತು. ಕಿವೀಸ್ ಪರ ವಿಲಿಯಮ್ಸನ್ (61 ರನ್) ಮತ್ತು ಡ್ಯಾರಿಲ್ ಮಿಚೆಲ್ (84 ರನ್) ಅರ್ಧಶತಕಗಳನ್ನು ಗಳಿಸಿದರು. ಆ ಮೂಲಕ ಇಂಗ್ಲೆಂಡ್‌ಗೆ ಕೇವಲ 104 ರನ್ ಗುರಿಯನ್ನು ನೀಡಿತ್ತು.
ಈ ಸುದ್ದಿಯನ್ನು ಓದಿ: Kane Williamson: ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಕೇನ್ ವಿಲಿಯಮ್ಸನ್