ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ನಿರ್ಣಾಯಕ ದಿನ ಆರಂಭಿಕ ಬ್ಯಾಟ್ಸ್ಮನ್ ಶುಭಮನ್ ಗಿಲ್(91) ಶತಕವಂಚಿತರಾದರು.
91 ರನ್ ಸಿಡಿಸಿದ್ದ ಗಿಲ್, ನಥನ್ ಲಯೋನ್ ಬೌಲಿಂಗ್ನಲ್ಲಿ ಸ್ಮಿತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಗಿಲ್ ಆಟದಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ಗಳಿದ್ದವು. ನಾಯಕ ಅಜಿಂಕ್ಯ ರಹಾನೆ (24) ರನ್ ಗಳಿಕೆ ವೇಗ ಹೆಚ್ಚಿಸುವ ಯತ್ನದಲ್ಲಿ ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದ್ದಾರೆ.
ಇತ್ತೀಚಿನ ವರದಿ ಪ್ರಕಾರ, ಚೇತೇಶ್ವರ ಪೂಜಾರ ಅರ್ಧಶತಕ (52) ಬಾರಿಸಿದ್ದು, ಆಟ ಮುಂದುವರೆಸಿದ್ದಾರೆ. ಇವರಿಗೆ ವಿಕೆಟ್ ಕೀಪರ್ ರಿಷಬ್ ಪಂತ್ ಉತ್ತಮ ಬೆಂಬಲ ನೀಡುತ್ತಿದ್ದು, ಆಗೊಮ್ಮೆ, ಈಗೊಮ್ಮೆ ಬೌಂಡರಿ, ಸಿಕ್ಸರ್ ಬಾರಿಸುತ್ತ ಎದುರಾಳಿ ಬೌಲರುಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಭಾರತದ ಗೆಲುವಿಗೆ ಇನ್ನೂ 111 ರನ್ ಅಗತ್ಯವಿದೆ.
1-1ರಿಂದ ಸರಣಿಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದು, ಈ ಪಂದ್ಯ ಗೆದ್ದ ತಂಡ ಸರಣಿ ಮುಡಿಗೇರಿಸಿಕೊಳ್ಳಲಿದೆ.