Saturday, 14th December 2024

ಉತ್ತಮ ಸ್ಥಿತಿಯಲ್ಲಿ ಆಸೀಸ್‌ ಪಡೆ, ಸ್ಮಿತ್‌ ಭರ್ಜರಿ ಅರ್ಧಶತಕ

ಸಿಡ್ನಿ: ಆರಂಭಿಕರಾದ ಡೇವಿಡ್ ವಾರ್ನರ್‌ ಹಾಗೂ ಆರನ್‌ ಫಿಂಚ್‌ ತಮ್ಮಾಟ ಮುಗಿಸಿದರೂ, ಸ್ಟೀವನ್‌ ಸ್ಮಿತ್‌ ಹಾಗೂ ಮಾರ್ಕಸ್‌ ಲ್ಯಾಬುಶ್ಗನ್ನ ಅವರ ಆಟಕ್ಕೆ ಕಡಿವಾಣ ಹಾಕಲು ಟೀಂ ಇಂಡಿಯಾ ವಿಫಲವಾಗಿದೆ.

ವೇಗಿ ಮೊಹಮ್ಮದ್ ಶಮಿ ಮಾತ್ರ ಒಂದು ವಿಕೆಟ್ ಕಿತ್ತರು. ಇತ್ತೀಚಿನ ವರದಿ ಪ್ರಕಾರ, ಆಸೀಸ್‌ ಎರಡು ವಿಕೆಟ್ ಕಳೆದುಕೊಂಡಿದ್ದು, 254 ರನ್‌ ಗಳಿಸಿ, ಉತ್ತಮ ಸ್ಥಿತಿಯಲ್ಲಿದೆ.

ಹಲವು ಪಂದ್ಯಗಳ ನಂತರ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಡೆಸಿದರು. ಇತ್ತೀಚೆಗಷ್ಟೇ ಮುಂಬರುವ ಎರಡು ಟಿ20 ವಿಶ್ವಕಪ್‌’ ನಲ್ಲಿ ಆಡುವ ಸಲುವಾಗಿ ಪದೇ ಪದೇ ಗಾಯಾಳಾಗುವುದನ್ನು ತಪ್ಪಿಸಲು ಬೌಲಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.