ಈ ಬಾರಿ ಗುಜರಾತ್ ಟೈಟಾನ್ಸ್ ತಂಡ ಕಳೆದ ವರ್ಷ ಪಡೆದ ಸೋಲಿಗೆ ಸೇಡು ತೀರಿಸಿ ಕೊಳ್ಳಲು ಪ್ರಯತ್ನಿಸಲಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ ಫೈಟ್ ನೀಡಲು ಚಿಂತಿಸುತ್ತಿದೆ. ಐಪಿಎಲ್ನಲ್ಲಿ ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ 4 ಪಂದ್ಯಗಳನ್ನು ಗೆದ್ದು ಒಟ್ಟು 8 ಅಂಕಗಳನ್ನು ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್ ತಂಡವು ಕೇವಲ 3 ಪಂದ್ಯಗಳನ್ನು ಗೆದ್ದಿದ್ದು, 6 ಅಂಕಗಳಿಂದ ಏಳನೇ ಸ್ಥಾನದಲ್ಲಿದೆ.
ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಪಂಜಾಬ್ ವಿರುದ್ಧ 13 ರನ್ನಿಂದ ಸೋತಿತ್ತು. ಈ ಸೋಲಿನೊಂದಿಗೆ ಕಳೆದ 3 ಪಂದ್ಯಗಳಿಂದ ನಿರಂತರವಾಗಿ ಸಾಗುತ್ತಿದ್ದ ಮುಂಬೈ ಇಂಡಿಯನ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಲು ಸಜ್ಜಾಗುತ್ತಿದೆ. ಗುಜರಾತ್ ಟೈಟಾನ್ಸ್ ತಂಡವು ಕಳೆದ ಪಂದ್ಯದಲ್ಲಿ 7 ರನ್ ಗಳಿಂದ ಲಕ್ನೋ ಸೂಪರ್ಜೈಂಟ್ಸ್ ಅನ್ನು ಸೋಲಿಸಿತು. ಕೊನೆಯ ಓವರ್ ವರೆಗೂ ನಡೆದ ಈ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಬೌಲರ್ಗಳು ಅಮೋಘ ಬೌಲಿಂಗ್ ಪ್ರದರ್ಶಿಸಿ ಗೆದ್ದುಕೊಂಡಿತ್ತು.