Sunday, 15th December 2024

ಅಸ್ಗರ್ ಅಫ್ಘಾನ್ ಗೆ ಕೊಕ್, ಅಫ್ಘಾನ್‌ಗೆ ಶಾಹಿದಿ ನಾಯಕ

ಕಾಬೂಲ್: ಅಫ್ಘಾನಿಸ್ಥಾನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಸ್ಗರ್ ಅಫ್ಘಾನ್ ಗೆ ಕೊಕ್ ನೀಡಲಾಗಿದ್ದು, ಟೆಸ್ಟ್ ಮತ್ತು ಏಕದಿನ ತಂಡದ ನಾಯಕತ್ವವನ್ನು ಹಶ್ಮತುಲ್ಲಾಹ್ ಶಾಹಿದಿಗೆ ನೀಡಲಾಗಿದೆ.

ಎಲ್ಲಾ ಮಾದರಿ ಕ್ರಿಕೆಟ್ ತಂಡದ ನಾಯಕತ್ವದಿಂದ ಅಸ್ಗರ್ ಅಫ್ಗಾನ್ ರನ್ನು ಕೈಬಿಡಲಾಗಿದೆ. ಅಫ್ಘಾನಿಸ್ಥಾನ್ ಕ್ರಿಕೆಟ್ ಬೋರ್ಡ್ ನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಡಗೈ ಆಟಗಾರ ಹಶ್ಮತುಲ್ಲಾಹ್ ಶಾಹಿದಿ ಅವರನ್ನು ಟೆಸ್ಟ್ ಮತ್ತು ಏಕದಿನ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ರಹಮತ್ ಶಾ ಅವರು ಉಪನಾಯಕನಾಗಿರಲಿದ್ದಾರೆ ಎಂದು ಬೋರ್ಡ್ ತಿಳಿಸಿದೆ.

ಆಲ್ ರೌಂಡರ್ ರಶೀದ್ ಖಾನ್ ಅವರು ಟಿ20 ತಂಡದ ಉಪನಾಯಕನಾಗಿ ಮುಂದುವರಿಯಲಿದ್ದಾರೆ. ಟಿ20 ತಂಡಕ್ಕೆ ನಾಯಕ ನನ್ನು ಆಯ್ಕೆ ಮಾಡಲಾಗುತ್ತದೆ ಎಂದು ಎಸಿಬಿ ತಿಳಿಸಿದೆ.