Thursday, 12th December 2024

ನನ್ನ ಹೀರೋ ಇನ್ನಿಲ್ಲ ಎಂದು ಟ್ವೀಟ್ ಮಾಡಿದ ಸೌರವ್‌ ಗಂಗೂಲಿ 

ನವದೆಹಲಿ: ಫುಟ್ ಬಾಲ್ ಲೋಕದ ದಂತಕಥೆ ಡಿಯಾಗೊ ಮರಡೊನಾ ನಿಧನಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಕಂಬನಿ ಮಿಡಿದಿದ್ದಾರೆ.

ಗಂಗೂಲಿ ಟ್ವೀಟ್ ಮಾಡಿ, ನನ್ನ ಹೀರೋ ಇನ್ನಿಲ್ಲ, ನನ್ನ ಹುಚ್ಚು ಮೇಧಾವಿ ಶಾಂತವಾಗಿ ವಿಶ್ರಾಂತಿ ತೆಗೆದುಕೊಳ್ಳಿ, ನಾನು ಫುಟ್ ಬಾಲ್ ನ್ನು ನೋಡುತ್ತಿದ್ದುದೇ ನಿಮಗೋಸ್ಕರ ಎಂದು ಬರೆದುಕೊಂಡಿದ್ದಾರೆ.

ಜಗತ್ತಿನ ಫುಟ್ ಬಾಲ್ ಲೋಕದ ಸರ್ವಶ್ರೇಷ್ಠ ಆಟಗಾರ ಎಂದು ಜನಪ್ರಿಯವಾಗಿರುವ ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರ ನಾಯಕತ್ವದಲ್ಲಿ ದೇಶ ವಿಶ್ವಕಪ್ ಗೆದ್ದುಕೊಂಡಿತ್ತು.

ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿ, ಕ್ರೀಡಾಲೋಕ ಮತ್ತು ಫುಟ್ ಬಾಲ್ ಜಗತ್ತು ಒಬ್ಬ ಉತ್ತಮ ಆಟಗಾರನನ್ನು ಕಳೆದು ಕೊಂಡಿದೆ. ನಾವೆಲ್ಲರೂ ನಿಮ್ಮನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಭಾರತ ಕ್ರೀಡಾ ಜಗತ್ತಿನ ಅನೇಕರು ಡಿಯಾಗೊ ಮರಡೊನಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.