Friday, 22nd November 2024

ಟಿ20 ಶ್ರೇಯಾಂಕ: 2ನೇ ಸ್ಥಾನಕ್ಕೇರಿದ ‘ಟೀಂ ಇಂಡಿಯಾ’

ವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೊಸ ತಂಡದ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ.

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನ ಮಣಿಸಿದ ಭಾರತ ತಂಡ, ರ್ಯಾಂಕಿಂಗ್‍ನಲ್ಲಿ ಎರಡನೇ ಸ್ಥಾನ ದಲ್ಲಿರುವ ಇಂಗ್ಲೆಂಡ್ ವಿರುದ್ಧ ಏಳು ಅಂಕಗಳ ಮುನ್ನಡೆ ಸಾಧಿಸಿದೆ.

ಮೊದಲ ಟಿ20 ಸೋಲಿನ ಬಳಿಕ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯ ವನ್ನ ಗೆದ್ದು ಸರಣಿಯನ್ನು ಸಮಬಲಗೊಳಿಸಿತು. ಹೈದರಾಬಾದ್ನಲ್ಲಿ ನಡೆದ ಮೂರನೇ ಟಿ 20 ಪಂದ್ಯವನ್ನ ಗೆದ್ದಿತು.

ಇದರಿಂದ ಭಾರತ ಒಂದು ಪಾಯಿಂಟ್ ಗಳಿಸಿತು ಮತ್ತು ಈಗ 268 ಅಂಕಗಳನ್ನ ಹೊಂದಿ ದ್ದರೆ, ಇಂಗ್ಲೆಂಡ್ ಏಳು ಪಾಯಿಂಟ್ಸ್ ಹಿಂದಿದೆ. ಭಾರತವು ಈಗ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನ ಆಡಬೇಕಾಗಿದೆ. ದಕ್ಷಿಣ ಆಫ್ರಿಕಾ 258 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ಬುಧವಾರ ಪ್ರಾರಂಭವಾಗುವ ಸರಣಿಯ ಮೂಲಕ ಅವರು ತಮ್ಮ ಶ್ರೇಯಾಂಕವನ್ನ ಸುಧಾರಿಸಬಹುದು.

ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಇನ್ನೂ ಮೂರು ಪಂದ್ಯಗಳನ್ನು ಆಡಬೇಕಾಗಿದೆ ಮತ್ತು ಅವರ ಶ್ರೇಯಾಂಕವನ್ನು ಸುಧಾರಿಸ ಬಹುದು. ಉಳಿದ ಮೂರು ಪಂದ್ಯಗಳಲ್ಲಿ ಯಾವುದಾದರೂ ಒಂದನ್ನು ಗೆದ್ದರೆ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿ ಉಳಿಯುತ್ತದೆ. ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ಆರನೇ ಸ್ಥಾನಕ್ಕೆ ಕುಸಿದಿದೆ.