ಆರ್‌ಸಿಬಿ ಕಪ್ ಗೆಲ್ಲಬೇಕು; ಈ ತಂಡ ಎದುರಾಳಿಯಾದರೆ ಕಷ್ಟ ಎಂದ ಚೆನ್ನೈ ಆಟಗಾರ
"ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲು ಆರ್‌ಸಿಬಿ ಸಿದ್ಧವಿದೆ. ಆದರೆ ಆರ್‌ಸಿಬಿಯನ್ನು ಸೋಲಿಸುವ ಅವಕಾಶವಿರುವ ಏಕೈಕ ತಂಡ ಎಂದರೆ ಮುಂಬೈ ಇಂಡಿಯನ್ಸ್. ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಆಗಬಹುದು. ನಾನು ಆರ್‌ಸಿಬಿ ಆಗಿದ್ದರೆ, ನನ್ನ ಅತ್ಯುತ್ತಮ ಫೈನಲಿಸ್ಟ್ ತಂಡ ಗುಜರಾತ್ ಟೈಟಾನ್ಸ್ ಆಗುತ್ತಿತ್ತು" ಎಂದು ಅಶ್ವಿನ್ ಹೇಳಿದರು.


ಚೆನ್ನೈ: ಚೊಚ್ಚಲ ಐಪಿಎಲ್(IPL 2025) ಟ್ರೋಫಿ ಗೆಲ್ಲುವ ಸನಿಹದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಫೈನಲ್(RCB Fina) ಪ್ರವೇಶಿಸಿದೆ. ಆದರೆ ಫೈನಲ್ ಎದುರಾಳಿ ಯಾರೆಂಬುದು ಇನ್ನಷ್ಟೇ ಖಚಿತವಾಗಬೇಕಿದೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಹಿರಿಯ ಆಟಗಾರ ಆರ್.ಅಶ್ವಿನ್(R Ashwin) ಅವರು ಭವಿಷ್ಯ ನುಡಿದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಫೈನಲ್ ಪ್ರವೇಶಿಸಿದರೆ ಆರ್‌ಸಿಬಿಸಿ ಕಪ್ ಗೆಲ್ಲುವುದು ಕಷ್ಟ ಎಂದು ಹೇಳಿದ್ದಾರೆ.
ಗುರುವಾರ ಚಂಡೀಗಢದ ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್(RCB vs PBKS) ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಭರ್ಜರಿಯಾಗಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತ್ತು.
"ಆರ್‌ಸಿಬಿ ಐಪಿಎಲ್ ಗೆಲ್ಲಬೇಕಾದರೆ, ಗುಜರಾತ್ ಟೈಟಾನ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಬೇಕು. ಏಕೆಂದರೆ ಆರ್‌ಸಿಬಿ ವಿರುದ್ಧ ಗೆಲ್ಲುವ ಅವಕಾಶ ಹೊಂದಿರುವ ಏಕೈಕ ತಂಡ ಮುಂಬೈ ಆಗಿರುವುದರಿಂದ ಅವರು ಫೈನಲ್‌ಗೆ ಅರ್ಹತೆ ಪಡೆಯಬಾರದು. ಒಂದೊಮ್ಮೆ ಮುಂಬೈ ಫೈನಲ್‌ಗೆ ಬಂದರೆ ಯಾವುದೇ ಬೆಲೆ ತೆತ್ತಾದರೂ ಅವರನ್ನು ತಡೆಯಬೇಕು" ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ 'ಆಶ್ ಕಿ ಬಾತ್' ನಲ್ಲಿ ಹೇಳಿದರು.
12th Man Army, you are everything for us.❤️
— Royal Challengers Bengaluru (@RCBTweets) May 29, 2025
One last dance with God’s grace! 🧿🙏 pic.twitter.com/nGoGvSSVYT
"ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲು ಆರ್‌ಸಿಬಿ ಸಿದ್ಧವಿದೆ. ಆದರೆ ಆರ್‌ಸಿಬಿಯನ್ನು ಸೋಲಿಸುವ ಅವಕಾಶವಿರುವ ಏಕೈಕ ತಂಡ ಎಂದರೆ ಮುಂಬೈ ಇಂಡಿಯನ್ಸ್. ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಆಗಬಹುದು. ನಾನು ಆರ್‌ಸಿಬಿ ಆಗಿದ್ದರೆ, ನನ್ನ ಅತ್ಯುತ್ತಮ ಫೈನಲಿಸ್ಟ್ ತಂಡ ಗುಜರಾತ್ ಟೈಟಾನ್ಸ್ ಆಗುತ್ತಿತ್ತು" ಎಂದು ಅಶ್ವಿನ್ ಹೇಳಿದರು.
ಇದನ್ನೂ ಓದಿ IPL 2025: ಟ್ರೋಫಿ ಗೆದ್ದರೆ ರಜೆ ಘೋಷಿಸಲು ಸಿದ್ದರಾಮಯ್ಯಗೆ ಪತ್ರ ಬರೆದ ಆರ್‌ಸಿಬಿ ಅಭಿಮಾನಿ
ಐಪಿಎಲ್ ಫೈನಲ್‌ನಲ್ಲಿ ಆಡುವಾಗ ಮುಂಬೈ ತಂಡವು ಅತ್ಯುತ್ತಮ ದಾಖಲೆಯನ್ನು ಹೊಂದಿದೆ ಏಕೆಂದರೆ ಅವರು ಆರು ಬಾರಿ ಫೈನಲ್ ಪಂದ್ಯಗಳಲ್ಲಿ ಐದು ಬಾರಿ ಗೆದ್ದಿದ್ದಾರೆ. ಮತ್ತೊಂದೆಡೆ, ಆರ್‌ಸಿಬಿ ತನ್ನ ಇತಿಹಾಸದಲ್ಲಿ ಇದುವರೆಗೆ ಆಡಿರುವ ಎಲ್ಲಾ ಫೈನಲ್‌ಗಳಲ್ಲಿ ಸೋತಿದೆ. ಆರ್‌ಸಿಬಿಗೆ ಇದು ನಾಲ್ಕನೇ ಐಪಿಎಲ್ ಫೈನಲ್ ಪಂದ್ಯವಾಗಿದೆ.